Important
Trending

Fact Check: ಮಕ್ಕಳು ಕಳ್ಳರು ಬಂದಿರುವುದು ನಿಜನಾ? ಅಸಲಿ ಸುದ್ದಿ ಇಲ್ಲಿದೆ ನೋಡಿ?

ಕಾರವಾರ: ಇದೀಗ ಎಲ್ಲೆಡೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ. ಅಲ್ಲಿ ಮಕ್ಕಳು ಕಳ್ಳರು ಬಂದಿದ್ದಾರೆ. ಆ ಊರಿನಲ್ಲಿ ಹೀಗಾಗಿದೆಯಂತೆ… ಹೀಗೆ ಎಲ್ಲೆಡೆ ಅಂತೆ ಕಂತೆಗಳ ಕಥೆ ಜೋರಾಗಿದೆ. ಕಾರವಾರದಲ್ಲೂ ಇಂತಹದೇ ಸುದ್ದಿ ಹಬ್ಬಿತ್ತು. ಆದರೆ, ನಗರದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿಯಲ್ಲಿ ಸತ್ಯಾಂಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಂತ ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.

KSRTC ವೋಲ್ವೊ ಬಸ್ ಮತ್ತು ಟೆಂಪೋ ನಡುವೆ ಅಪಘಾತ: 20 ಪ್ರಯಾಣಿಕರಿಗೆ ಗಾಯ

ನಗರದ ದಿವೇಕರ ವಾಣಿಜ್ಯ ಕಾಲೇಜಿನ ಸಮೀಪ ಮೂವರು ಯುವಕರು ಒಬ್ಬ ಯುವಕನನ್ನು ಹಿಂಬಾಲಿಸಿದ್ದಾರೆ ಎಂದು ವದಂತಿ ಎಲ್ಲೆಡೆ ಹಬ್ಬಿತ್ತು, ಅಲ್ಲದೆ, ಈ ನಾಲ್ವರನ್ನು ಠಾಣೆಗೆ ಕರೆಯಿಸಿ ವಿಚಾರಿಸಿದ್ದು ಎಲ್ಲರೂ ಪರಿಚಯದವರಾಗಿದ್ದಾರೆ. ರಾತ್ರಿ ದಾಂಡಿಯಾ ಮುಗಿಸಿಕೊಂಡು ಹೋಗುವಾಗ ಹಳೆ ದ್ವೇಷದ ಹಿನ್ನೆಲೆಯಲ್ಲಿ ಒಬ್ಬ ಯುವಕನನ್ನು ಮೂವರು ಹಿಂಬಾಲಿಸಿದ್ದರು. ಇದನ್ನೇ ಮಕ್ಕಳ ಕಳ್ಳರು ಎಂಬAತೆ ಬಿಂಬಿಸಲಾಗಿದೆ. ನಗರದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವುದು ಸುಳ್ಳುಸುದ್ದಿ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button