Info
Trending

ಡಾ.ಕಮಲಾ ಮತ್ತು ಆರ್.ಎನ್.ನಾಯಕ ಆಸ್ಪತ್ರೆಗೆ ಎಸಿ ಅಜೀತ ಭೇಟಿ

ಕೋವಿಡ್ ಲಸಿಕಾ ಕೇಂದ್ರ ಪರಿಶೀಲನೆ
ಆಸ್ಪತ್ರೆ ವಾತವರಣದ ಬಗ್ಗೆ ಮೆಚ್ಚುಗೆ

ಅಂಕೋಲಾ : ಕುಮಟಾ ಉಪವಿಭಾಗಾಧಿಕಾರಿ ಅಜೀತ ಎಂ.ಸೋಮವಾರ ಪಟ್ಟಣದ ಡಾ.ಕಮಲಾ ಮತ್ತು ಆರ್.ಎನ್.ನಾಯಕ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಆರಂಭಿಸಲಾದ ಕೋವಿಡ್ ಲಸಿಕಾ ಕೇಂದ್ರ ಪರಿಶೀಲಿಸಿ ದರು.
ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 3 ಆರ್ಯಾ ಮೆಡಿಕಲ್‍ನಲ್ಲಿ 1, ಮತ್ತು ಡಾ. ಕಮಲಾ ಮತ್ತು ಆರ್. ಎನ್.ನಾಯಕ ಆಸ್ಪತ್ರೆಯಲ್ಲಿ 3 ಕೋವಿಡ್ ಲಸಿಕಾ ಕೇಂದ್ರ ಆರಂಭಿಸಲಾಗಿದೆ. ಕೆ.ಎಲ್.ಇ.ಸಂಸ್ಥೆಯ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಇವರೆಗೆ 2 ಸುತ್ತಿನಲ್ಲಿ ಒಟ್ಟೂ 95 ಜನರಿಗೆ ಆರ್.ಎನ್.ನಾಯಕ ಆಸ್ಪತ್ರೆಯಲ್ಲಿ ಕೋವಿಶಿಲ್ಡ್ ಲಸಿಕೆ ವಿತರಿಸಲಾಗಿದೆ.

ಸರ್ಕಾರದ ಮಾರ್ಗಸೂಚಿಯಂತೆ ಪ್ರತ್ಯೇಕ-ಪ್ರತ್ಯೇಕ ಕೇಂದ್ರಗಳನ್ನು ಮತ್ತು ಪೂರಕ ವ್ಯವಸ್ಥೆ ಮಾಡ ಲಾಗಿದ್ದು, ಎಸಿ ಅಜೀತ ಲಸಿಕಾ ಕೇಂದ್ರಗಳನ್ನು ಪರಿಶೀಲಿಸಿದರಲ್ಲದೆ ಆರ್.ಎನ್.ನಾಯಕ ಆಸ್ಪತ್ರೆಯ ಒಳ ನೋಟ ಮತ್ತಿತರ ಮೂಲಭೂತ ಸೌಕರ್ಯಗಳ ಮೆಚ್ಚುಗೆ ವ್ಯಕ್ತಪಡಿಸಿ, ಜನರ ಆರೋಗ್ಯ ಕಾಳಜಿಯಿಂದ ಮತ್ತ ಷ್ಟು ಸೇವಾ ಸೌಕರ್ಯಗಳನ್ನು ವಿಸ್ತರಿಸುವಂತೆ ಮಯೂರ್ ನಾಯಕ ಅವರಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಉದಯ ವಿ. ಕುಂಬಾರ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್, ಪ್ರಮುಖರಾದ ಸತ್ಯಾನಂದ ನಾಯಕ ಬೇಲೇಕೇರಿ. ಗೋಪಾಲ ನಾಯಕ ಅಡ್ಲೂರು, ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button