Important
Trending

ಅಬ್ಬಾ! ಎರಡು ಬೈಕ್, ವಿದ್ಯುತ್ ಕಂಬ, ಬಸ್ ನಿಲ್ದಾಣಕ್ಕೆ ಗುದ್ದಿ ಪಲ್ಟಿಯಾದ ಟಿಪ್ಪರ್

ಕಾರವಾರ: ಚಾಲಕನ ನಿಯಂತ್ರಣ ತಪ್ಪಿದ್ದ ಟಿಪ್ಪರ್ ಒಂದು ಎರಡು ಬೈಕ್, ಬಸ್ ನಿಲ್ದಾಣ, ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿ ಹೊಡೆದಿದ್ದು, ಅದೃಷ್ಟವಸಾತ್ ಬೈಕ್ ಸವಾರ ಪ್ರಾಣಪಯಾದಿಂದ ಪಾರಾಗಿರುವ ಘಟನೆ ಕಾರವಾರ ತಾಲ್ಲೂಕಿನ ಸದಾಶಿವಗಡದ ಮಹಮ್ಮಾಯ ದೇವಸ್ಥಾನದ ಬಳಿ ನಡೆದಿದೆ.

ಕದ್ರಾದಿಂದ ಸದಾಶಿವಗಡ ಕಡೆ ಅತಿ ವೇಗವಾಗಿ ಹಾಗೂ ಅರಾಜುಕತೆಯಿಂದ ಟಿಪ್ಪರ್ ಚಾಲಕ ಚಲಾಯಸಿಕೊಂಡು ಬಂದ ಪರಿಣಾಮ‌ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿಟ್ಟ ಸ್ಕೂಟಿಗೆ ಗುದ್ದಿದ್ದು, ಬಳಿಕ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದ ಬೈಕ್ ಸವಾರನಿಗೆ ಗುದ್ದಿ ಬಸ್ ನಿಲ್ದಾಣ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಫಲ್ಟಿಯಾಗಿದೆ.

ಘಟನೆಯಲ್ಲಿ ಬೈಕ್ ಸವಾರ ರಾಜೇಖಾನಭಾಗದ ಸಂದೀಪ ಕಾಂಬಳೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಯಾದಿಂದ ಪಾರಾಗಿದ್ದಾರೆ. ಇನ್ನು ಬೈರಾದ ಟಿಪ್ಪರ್ ಚಾಲಕ ಇಸ್ಮಾಯಿಲ್ ಸಿಲೇದಾರ ಗೆ ಕೂಡ ಸಣ್ಣ ಪುಟ್ಟಗಾಯಗಳಾಗಿದೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button