Important
Trending

ಬೈಕ್ ಮತ್ತು ಕಾರ್ ನಡುವೆ ಅಪಘಾತ: ಪ್ರಸಿದ್ಧ ಯಕ್ಷಗಾನ ಭಾಗವತರ ಸಾವು

ಯಲ್ಲಾಪುರ: ಬೈಕ್ ಮತ್ತು ಕಾರ್ ನಡುವೆ ನಡೆದ ಅಪಘಾತದಲ್ಲಿ ಜಿಲ್ಲೆಯ ಯಕ್ಷಗಾನ ಭಾಗವತರಾಗಿದ್ದ ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ನಿಧನರಾಗಿದ್ದಾರೆ. ತಾಲೂಕಿನ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಹಿತ್ಲಳ್ಳಿ ಕ್ರಾಸ್ ಬಳಿ ಬೈಕ್ ಮತ್ತು ಕಾರ್ ನಡುವೆ ಅಪಘಾತ ನಡೆದಿದ್ದು, ಗಾಯಗೊಂಡಿದ್ದ ತಿಮ್ಮಪ್ಪ ಭಾಗ್ವತ್ ಅವರನ್ನು ಶಿರಸಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಭಗವತರು ಮೃತಪಟ್ಟಿದ್ದಾರೆ. ಯಕ್ಷಗಾನದ ರಾಗಗಳಲ್ಲಿ ವಿಶೇಷ ಪರಿಣಿತ ಪಡೆದಿದ್ದ ಇವರ ನಿಧನವು ಯಕ್ಷಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಗಣ್ಯರು, ಕಲಾಸಕ್ತರು ಕಂಬನಿ ಮಿಡಿದಿದ್ದಾರೆ.

ಬೈಕ್‌ಗೆ ಡಿಕ್ಕಿ ಹೊಡೆದ ಟಾಟಾ ಏಸ್: ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವು

ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರಾಗಿದ್ದರು. ವಿಶೇಷ ಅಂದರೆ ತಾವೇ ಮಕ್ಕಳ ತಾಳಮದ್ದಲೆ ಕೂಟ ಸ್ಥಾಪಿಸಿದ್ದರು. ಮಕ್ಕಳಿಗೆ ಯಕ್ಷಗಾನದ ಅರ್ಥಗಾರಿಕೆ, ಭಾಗವತಿಕೆ, ಸಂಗೀತ ಕಲಿಸುತ್ತಿದ್ದ ತಿಮ್ಮಪ್ಪ ಭಾಗ್ವತ್ ಅವರು ನಾಟಕ ರಂಗಭೂಮಿಗೆ ಸಂಗೀತವನ್ನೂ ನೀಡುತ್ತಿದ್ದರು. ಮೃತರು ತಂದೆ, ತಾಯಿ, ಓರ್ವ ಪುತ್ರ, ಪುತ್ರಿ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button