ಇದೇ ಮೊದಲು: ಪೊಲೀಸ್ ಠಾಣೆಯಲ್ಲಿ ಉಗಿ ಕೊಳವೆ ಕುಕ್ಕರ್ ನಿಂದ ಹೊರಬರುವ ಬಿಸಿ ಹಬೆ ಸೇವಿಸುವ ಪೊಲೀಸ್ ಸಿಬ್ಬಂದಿ ಏನೀದರ ವಿಶೇಷ ನೀವೇ ನೋಡಿ?
ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಲಾಕ್‌ಡೌನ್ ಸೇರಿದಂತೆ ಇತರೆ ಕ್ಲಿಷ್ಟಕರ ಅವಧಿಯಲ್ಲಿಯೂ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆ ಖಾಕಿ ಪಡೆಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಮಾಗದರ್ಶನದಲ್ಲಿ ಅಂಕೋಲಾ ಪೋಲೀಸ್ ಠಾಣೆಯಲ್ಲಿ ಉಗಿ ಕೊಳವೆ ಅಳವಡಿಸಿ ಸಿಬ್ಬಂದಿಗಳ ಆರೋಗ್ಯ ಕ್ಷಮತೆ ಹೆಚ್ಚಿಸುವ ವಿನೂತನ ಪ್ರಯೋಗ ಉತ್ತರಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆರಂಭಗೊoಡಿದೆ.
ಕರೊನಾ 2 ನೇ ಅಲೆ ಎಲ್ಲೆಡೆ ವ್ಯಾಪಿಸುತ್ತಿದ್ದು ಆತಂಕದ ಅಲೆ ಸೃಷ್ಟಿಸುತ್ತಿದೆ. ಈ ನಡುವೆ ಕರೋನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುವ ಆರೋಗ್ಯ, ಕಂದಾಯ, ಪೊಲೀಸ್ ಮತ್ತಿತರ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಸೇವೆ ಶ್ಲಾಘಿಸಲೇಬೇಕಿದೆ. ಲಾಕ್ ಡೌನ್ ಸೇರಿದಂತೆ ಇತರೆ ತುರ್ತು ಹಾಗೂ ಕ್ಲಿಷ್ಟಕರ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿದ್ದು, ಸಾಂಕ್ರಾಮಿಕ ರೋಗದಿಂದ ತನ್ನ ಸಿಬ್ಬಂದಿಗಳ ಆರೋಗ್ಯ ರಕ್ಷಣೆಯ ಮಹತ್ವದ ಉದ್ದೇಶದಿಂದ ಅಂಕೋಲಾ ಪೋಲೀಸ್ ಠಾಣೆಯಲ್ಲಿ ವಿನೂತನವಾಗಿ ಆರೋಗ್ಯ ವರ್ಧನೆಗೆ ಒತ್ತು ನೀಡಲಾಗಿದೆ.
ಕಳೆದ ವರ್ಷ ತನ್ನ ಸಿಬ್ಬಂದಿಗಳಿಗೆ ಆಯುರ್ವೇದಿಕ ಗಿಡ ಮೂಲಿಕೆ ಮತ್ತಿತರ ಔಷಧೀಯ ಗುಣಗಳುಳ್ಳ ಬಿಸಿ ಬಿಸಿ ಕಷಾಯ ತಯಾರಿಸಿ ಕರೊನಾ ವಿರುದ್ಧ ಸೆಣಸಿದ್ದ ಖಾಖಿ ಪಡೆ, ಈ ವರ್ಷ ತನ್ನ ಸಿಬ್ಬಂದಿಗಳ ಆರೋಗ್ಯ ಕ್ಷಮತೆ ಹೆಚ್ಚಿಸಲು ಜಿಲ್ಲೆಯಲ್ಲೇ ಮೊದಲ ಬಾರಿಗೆ, ಎಸ್ಪಿ ಶಿವಪ್ರಕಾಶ ದೇವರಾಜು ಹಾಗೂ ಇತರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸೈ ಈ ಸಿ ಸಂಪತ್ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಠಾಣೆಯ ಪ್ರತ್ಯೇಕ ಕೊಠಡಿಯೊಂದಲ್ಲಿ ಕುಕ್ಕರನಲ್ಲಿ ನೀರು ಹಾಕಿ, ಅದಕ್ಕೆ ತುಳಿಸಿದಳ, ನೀಲಗಿರಿ ಎಣ್ಣೆ ಮತ್ತಿತರ ಉಸಿರಾಟ ಪ್ರಕ್ರಿಯೆ ಉತ್ತಮ ಗೊಳಿಸುವ ಆರೋಗ್ಯದಾಯಕ ಅಂಶಗಳನ್ನು ಸೇರಿಸಿ ಚೆನ್ನಾಗಿ ಕುದಿಸಲಾಗುತ್ತದೆ. ಈ ವೇಳೆ ಕುಕ್ಕರನಿಂದ ಹೊರಬರುವ ಬಿಸಿ ಆವಿಯನ್ನು ಪ್ರತ್ಯೇಕ ಪೈಪ್ ಒಂದರ ಮೂಲಕ ಹಾದು ಹೋಗುವಂತೆ ಮಾಡಲಾಗಿದ್ದು, ಮುಖ್ಯ ಪೈಪಗೆ ಅಡ್ಡಲಾಗಿ ಪ್ರತ್ಯೇಕ ಪ್ರತ್ಯೇಕ ಉಗಿ ಕೊಳವೆ ಅಳವಡಿಸಲಾಗಿದೆ.
ಆ ಕೊಳವೆಗಳ ಎದುರು ಸಿಬ್ಬಂದಿಗಳು ಕುಳಿತು ತಮ್ಮ ಮೂಗಿನಿಂದ ಬಿಸಿ ಹವೆ ಸೇವಿಸುವಂತೆ ವ್ಯವಸ್ಥೆ ಗೊಳಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿಯೇ ಮೊದಲ ಪ್ರಯತ್ನವಾಗಿ ಅಕೋಲಾ ರಾಣೆಯಲ್ಲಿ ಹೊಸ ಮಾದರಿಯ ಮತ್ತು ಅಪಾಯ ರಹಿತ ಆರೋಗ್ಯ ವರ್ಧಕ ಉಗಿ ಸೇವನೆ ಆರಂಭಿಸಲಾಗಿದ್ದು, ಇದು ಯಶಸ್ವಿಯಾದರೆ ಜಿಲ್ಲೆಯ ಇತರೆ ಠಾಣೆಗಳಲ್ಲಿಯೂ ಇದೇ ಮಾದರಿ ಬಳಸುವ ಸಾಧ್ಯತೆ ಕೇಳಿಬಂದಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಶರವೇಗದಲ್ಲಿ ಏರುತ್ತಿದೆ. ಜಿಲ್ಲಾಡಳಿತ ಕಠಿಣ ಕ್ರಮದ ಬಳಿಕವೂ ಕೋವಿಡ್ ಹೆಚ್ಚುತ್ತಲೇ ಇದ್ದು, ಜಿಲ್ಲಾಡಳಿತ, ತಾಲೂಕಾಡಳಿತದ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಅಲ್ಲದೆ ಕರೋನಾ ವಾರಿಯರ್ಸಗಳಾದ ಪೋಲೀಸ್ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಜನಸಂದಣಿ ಪ್ರದೇಶ, ಮಾರುಕಟ್ಟೆ, ಮುಂತಾದ ಪ್ರದೇಶದಲ್ಲಿ ಕರ‍್ಯನರ‍್ವಹಿಸುವ ಪೊಲೀಸರಿಗೆ ಸಹಜವಾಗೇ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. .
ಈ ಹಿನ್ನಲೆಯಲ್ಲಿ ಪೊಲೀಸರು ಮೊದಲ ಪ್ರಯತ್ನವಾಗಿ ಅಕೋಲಾ ರಾಣೆಯಲ್ಲಿ ಹೊಸ ಮಾದರಿಯ ಮತ್ತು ಅಪಾಯ ರಹಿತ ಆರೋಗ್ಯ ವರ್ಧಕ ಉಗಿ ಸೇವನೆ ಆರಂಭಿಸಿದ್ದಾರೆ., ಇದು ಯಶಸ್ವಿಯಾದರೆ ಜಿಲ್ಲೆಯ ಇತರೆ ಠಾಣೆಗಳಲ್ಲಿಯೂ ಇದೇ ಮಾದರಿ ಬಳಸುವ ಸಾಧ್ಯತೆ ಕೇಳಿಬಂದಿದೆ.
ಒಟ್ನಿನಲ್ಲಿ ಕರ್ತವ್ಯಕ್ಕೆ ಪೂರಕವಾಗಿ ತಮ್ಮ ದೇಹಾರೋಗ್ಯ ಕಾಪಾಡಿಕೊಂಡು, ಪೊಲೀಸರು ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ ಎನ್ನುವುದು ನಾಗರಿಕರ ಆಶಯವಾಗಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ