ಅಕ್ರಮವಾಗಿ ಸಾಗುವಾನಿ ಸಾಗಿಸುತ್ತಿದ್ದ ಕಾರು ಪಂಚರ್| ಸಾಗುವಾನಿ ತುಂಡುವಶಕ್ಕೆ | ಆರೋಪಿಗಳು ಪರಾರಿ
ಭಟ್ಕಳ: ಅಕ್ರಮವಾಗಿ ಸಾಗುವನಿ ತುಂಡುಗಳನ್ನು ಸಾಗಿಸುತ್ತಿದ್ದಾಗ ಆರೋಪಿಗಳ ಕಾರು ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಘಟನೆ ಭಟ್ಕದಲ್ಲಿ ನಡೆದಿದೆ. ಈ ವೇಳೆ ಭಟ್ಕಳ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ವಾಹನ ಸಮೇತ ಸಾಗವಾನಿ ತುಂಡನ್ನು ವಶಕ್ಕೆ ಪಡೆದಿದ್ದಾರೆ . ಆದರೆ ಆರೋಪಿಗಳು ಪರಾರಿಯಾಗಿದ್ದಾರೆ.
ಅರಣ್ಯ ಇಲಾಖೆಯ ಹೊನ್ನಾವರದ ವಿಭಾಗದ ಭಟ್ಕಳ ವಲಯದ ಸಿಬ್ಬಂದಿಗಳು ರಾತ್ರಿ ಗಸ್ತು ತಿರುಗುತ್ತಿರುವಾಗ ಉತ್ತರಕೊಪ್ಪ ರಸ್ತೆ ಹತ್ತಿರ ಅತ್ತಿಬಾರ ಎಂಬಲ್ಲಿ ಯಾರೋ ಕಳ್ಳರು ಅಕ್ರಮವಾಗಿ ಸಾಗವಾನಿ ಮರ ಕಡಿದು ತುಂಡು ತಯಾರಿಸಿ 15.000 ರೂ. ಬೆಲೆಬಾಳುವ ತುಂಡು ಸಾಗಿಸುತ್ತಿದ್ದರು ಎಂಬ ಬಗ್ಗೆ ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದರು.
ಆದರೆ ಕಾರು ಪಂಚರ್ ಆಗಿದ್ದ ಕಾರಣ ವಾಹನ ಅಲ್ಲಿಯೇ ಇರುವುದನ್ನು ಕಂಡ ಸ್ಥಳೀಯರು ವಾಹನವನ್ನು ಹಿಡಿದು ತಮ್ಮ ವಶದಲ್ಲಿರಿಸಿಕೊಂಡಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ.
ಗುರುವಾರದಂದು ಮುಂಜಾನೆ ಸ್ಥಳಕ್ಕೆ ತೆರಳಿ ಸ್ಕಾರ್ಪಿಯೋ ಕಾರು ಮತ್ತು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ 3 ಸಾಗುವಾನಿ ತುಂಡುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸುದರ್ಶನ್ ಆರ್. ಕೆ. ಹಾಗೂ ವಲಯ ಅರಣ್ಯಾಧಿಕಾರಿ ಸವಿತಾ ಆರ್. ದೇವಾಡಿಗ, ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಜಗದೀಶ್ ನಾಯ್ಕ ಹಾಗೂ ಮದುಕುಮಾರ ನಾಯ್ಕ, ಅರಣ್ಯ ರಕ್ಷಕ ಕಾಡಪ್ಪ, ವಾಹನ ಚಾಲಕ ಜೈದೀಪ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ