Important
Trending

ಯಕ್ಷಗಾನ ನೋಡಿಕೊಂಡು ಬರುತ್ತಿದ್ದ ತಾಯಿ, ಮಗ ರಸ್ತೆ ಮಧ್ಯೆ ಸಾವು: ನಸುಕಿನ ಜಾವ ನಡೆಯಿತು ಅಪಘಾತ

ಅಂಕೋಲಾ: ತಾಯಿ, ಮಗ ಯಕ್ಷಗಾನ ನೋಡಿಕೊಂಡು ಮರಳುತ್ತಿದ್ದರು. ಆದ್ರೆ, ಯಮರಾಯ ದಾರಿ ಮಧ್ಯೆ ಹೊಂಚುಹಾಕಿ ಕೂತಿದ್ದ. ಯಕ್ಷಗಾನ ನೋಡಿಕೊಂಡು ಬೈಕ್‌ನಲ್ಲಿ ಬರುತ್ತಿದ್ದ ತಾಯಿ, ಮಗ, ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ ರಾಮನಗುಳಿ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಯಕ್ಷಗಾನ ಮುಗಿದ ಬಳಿಕ ,ರಾಮನಗುಳ ಬಳಿ ಇನ್ನೊಂದು ವಾಹನಕ್ಕೆ ಓವರ್‌ಟೇಕ್ ಮಾಡಲು ಹೋದಾಗ, ಎದುರಿನಿಂದ ವಾಹನ ಬಂದ ಕಾರಣ ಬಲಗಡೆ ತಿರುಗಿ ಅಲ್ಲಿರುವ ವಿದ್ಯುತ್ ಕಂಬಕ್ಕೆ ಬಡಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹೌದು, ತಾಯಿ, ಮಗ ಇಬ್ಬರೂ ರಾತ್ರಿ ಕೊಡ್ಲಗದ್ದೆ ಗ್ರಾಮದಲ್ಲಿ ಯಕ್ಷಗಾನ ನೋಡಲು ಅಂಗಡಿಬೈಲ್ ನಿಂದ ತೆರಳಿದ್ದರು. ಯಕ್ಷಗಾನ ನೋಡಿಕೊಂಡು ನಸುಕಿನ ವೇಳೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದರಯ. ಈ ವೇಳೆ ಅಪಘಾತ ಸಂಭವಿಸಿದ್ದು, ಇಬ್ಬರೂ ಬಾರದ ಲೋಕಕ್ಕೆ ತೆರಳಿದ್ದಾರೆ. ಮೃತರನ್ನು ಅಂಕೋಲಾದ ಅಂಗನಡಿಬೈಲ್ ನಿವಾಸಿಗಳಾದ ಹರಿಹರ ರವಿ ಸಿದ್ಧಿ, ಬೇಬಿ ರವಿ ಸಿದ್ಧಿ ಎಂದು ಗುರುತಿಸಲಾಗಿದೆ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಕಾರವಾರ

Back to top button