ಕಾರವಾರ: ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜಂಟಿ ಪತ್ರಿಕಾಗೋಷ್ಠಿ ಮಾಡಿದ್ದು, ನಾಳಿನ ಲಾಕ್ ಡೌನ್ ಕುರಿತುಸಂಪೂರ್ಣ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಓಡಾಟವಿಲ್ಲ, ಖಾಸಗಿ ವಾಹನಗಳ ಸಂಚಾರವಿಲ್ಲ.
ಸರಕಾರ ಸೂಚಿಸಿದ ವಾಹನಗಳು ಹೊರತುಪಡಿಸಿ ಉಳಿದ ವಾಹನಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ನಿಗದಿಯಾದ ಮದುವೆ ಮನೆಯಲ್ಲಿ ಮಾಡಲು ಅವಕಾಶವಿದ್ದು, 40 ಜನರು ಮಾತ್ರ ಭಾಗವಹಿಸಬಹುದು. ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಪ್ರಯಾಣಕ್ಕೆ ಅವಕಾಶವಿಲ್ಲ ಎಂದಿದ್ದಾರೆ.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಸೀಲ್ ಮಾಡಲಾಗುವುದು. ಈ ಹಿಂದೆ ಹಲವು ಚಟುವಟಿಕೆಗಳಿತ್ತಾದರೂ ಈ ಬಾರಿ ಟೋಟಲ್ ಲಾಕ್‌ಡೌನ್ ಮಾಡಲಾಗಿದ್ದು, ಈ ಲಾಕ್ ಡೌನ್‌ನಲ್ಲಿ ಕೆಲವು ಚಟುವಟಿಕೆಗಳಿಗೆ ಮಾತ್ರ ಸರಕಾರ ಅವಕಾಶ ನೀಡಿದೆ.
ಸರಕಾರ ನಿಗದಿಪಡಿಸಿದ ವಾಹನ ಹೊರತುಪಡಿಸಿ ಈ ಬಾರಿ ಪ್ರತೀ ವಾಹನಗಳು ಬ್ಯಾನ್ ಮಾಡಲಾಗಿದ್ದು,
ನಾಳೆಯಿಂದ ಯಾವುದೇ ವಾಹನ ಸಿಕ್ಕಿದ್ರೆ 30 ದಿನಗಳವರೆಗೆ ಕೋರ್ಟ್‌ನಲ್ಲಿರುತ್ತೆ. ಅನಗತ್ಯ ಯಾವುದೇ ವಾಹನ ರಸ್ತೆಗಿಳಿದರೆ ಆ ವಾಹನ ಸೀಝ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಅಂತರ್‌ರಾಜ್ಯ, ಅಂತರ್‌ಜಿಲ್ಲೆ ಚೆಕ್‌ಪೋಸ್ಟ್‌ನಲ್ಲಿ ಅನುಮತಿ ರಹಿತ ಎಲ್ಲಾ ಸಂಚಾರ ಬ್ಯಾನ್ ಹಾಗು
ರೈಲು, ವಿಮಾನ ಬುಕ್ಕಿಂಗ್ ಇದ್ರೆ ಮಾತ್ರ ಸಾಗಬಹುದಾಗಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ವಿಸ್ಮಯ ನ್ಯೂಸ್ ಕಾರವಾರ