ಪದೇ ಪದೇ ತಪ್ಪಿಸಿಕೊಂಡ ಕೋವಿಡ್ ಸೋಂಕಿತ ವೃದ್ಧ: ಆ್ಯಂಬುಲೆನ್ಸ್ ನಲ್ಲಿ ಹಿಡಿದು ವಾರ್ಡ್ಗೆ ಶಿಪ್ಟ್: ತಪ್ಪಿಸಿಕೊಳ್ಳದಂತೆ ಕಾವಲು
ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಜನವಸತಿ ಪ್ರದೇಶದಲ್ಲಿ ತಿರುಗಾಡಲು ಆರಂಭಿಸಿದ್ದಾನೆ ವೃದ್ಧ, ವಸತಿ ಪ್ರದೇಶದಲ್ಲಿ ತಿರುಗಾಡಿದ್ದು, ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು.
ಯಲ್ಲಾಪುರ: ಜ್ವರದಿಂದ ಬಳಲುತ್ತಿದ್ದ ವೃದ್ಧನೊಬ್ಬ ಕೋವಿಡ್ ಪರೀಕ್ಷೆಗೆ ಒಳಗಾಗಿ, ಫಲಿತಾಂಶ ಬರುವ ಮೊದಲು ಊರು ಸುತ್ತಿ ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ಅಲ್ಲದೆ, ಪಾಸಿಟಿವ್ ಬಂದು, ಊರೂರು ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಒತ್ತಾಯವಾಗಿ ಹಿಡಿದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಮರುದಿನ ಬೆಳಿಗ್ಗೆ ಮತ್ತೆ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಜನವಸತಿ ಪ್ರದೇಶದಲ್ಲಿ ತಿರುಗಾಡಲು ಆರಂಭಿಸಿದ್ದಾನೆ ವೃದ್ಧ. ಶಿರಸಿ ಎಪಿಎಂಸಿ ಎದುರಿನ ವಸತಿ ಪ್ರದೇಶದಲ್ಲಿ ತಿರುಗಾಡಿದ್ದು, ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಹೀಗಾಗಿ ಮತ್ತೆ ವೃದ್ಧನನ್ನು ಹಿಡಿದು ಕೋವಿಡ್ ವಾರ್ಡ್ಗೆ ದಾಖಲಿಸಲಾಗಿದೆ.
ವೃದ್ಧನನ್ನು ತಾಲೂಕಿನ ಕಳಚೆ ಗ್ರಾಮದ ಅನಂತ ಹೆಬ್ಬಾರ (65) ಎಂದು ಗುರುತಿಸಲಾಗಿದೆ. ಈತ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ತಾಲ್ಲೂಕಾ ಆಸ್ಪತ್ರೆಗೆ ಬಂದು, ತನ್ನ ಪರೀಕ್ಷೆಗೆ ಒಳಪಟ್ಟು ಬಳಿಕ ನಂತರ ಜನವಸತಿ ಪ್ರದೇಶದಲ್ಲಿ ಸುತ್ತಾಡುತ್ತಿದ್ದ.
ಮಾಹಿತಿ ಪಡೆದ ಸಿಬ್ಬಂದಿ, ಎರಡು ಅಂಬ್ಯುಲೆನ್ಸ್ ಹಾಗೂ ಪೊಲೀಸರನ್ನು ಕರೆಯಿಸಿಕೊಂಡು ಆತನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಕುಟುಂಬದವರು ಯಾರು ಇಲ್ಲದ ಹಿನ್ನೆಲೆಯಲ್ಲಿ ಆತನನ್ನು ಕೋವಿಡ್ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಮರುದಿನ ಕೋವಿಡ್ ವಾರ್ಡಿನ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿಂದ ಈತ ಮತ್ತೆ ತಪ್ಪಿಸಿಕೊಂಡಿದ್ದ. ತಾಲ್ಲೂಕು ಆಸ್ಪತ್ರೆಯ ಆ್ಯಂಬ್ಯುಲೆನ್ಸ್ ಸಿಬ್ಬಂದಿಗಳು, ಪೊಲೀಸ್ ಹಾಗೂ ಸಾರ್ವಜನಿಕರ ಸಹಾಯದಿಂದ ಮತ್ತೆ ಸೋಂಕಿತ ವೃದ್ಧನನ್ನು ಹಿಡಿದು ವಾರ್ಡ್ನ ಪ್ರತ್ಯೇಕ ಕೊಠಡಿಯಲ್ಲಿಟ್ಟಿದ್ದು, ತಪ್ಪಿಸಿಕೊಳ್ಳದಂತೆ ಕಾವಲು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ವಿಸ್ಮಯ ನ್ಯೂಸ್, ಯಲ್ಲಾಪುರ