Follow Us On

WhatsApp Group
Big News
Trending

Massive Protest: ಆಸ್ಪತ್ರೆಯವರ ನಿರ್ಲಕ್ಷ್ಯದಿಂದಲೇ ಯುವಕ ಸಾವು ಆರೋಪ

ಸಾರ್ವಜನಿಕರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ಹೊನ್ನಾವರ: ಪಟ್ಟಣದ ಶರಾವತಿ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಸಾರ್ವಜನಿಕರು ಶ್ರೀದೇವಿ ಆಸ್ಪತ್ರೆ ಹಾಗೂ ವೈದ್ಯರು ಮತ್ತು ಮೆಡಿಕಲ್ ಮಾಫಿಯಾ ವಿರುದ್ದ ಘೋಷಣೆ ಮೊಳಗಿಸುತ್ತಾ ತಹಶೀಲ್ದಾರ ಕಛೇರಿಯವರೆಗೆ ಪ್ರತಿಭಟನಾ ಮೆರವಣೆಗೆ ( Massive protest) ನಡೆಸಿದರು. ಯುವಕ ಮಹಮ್ಮದ್ ಇಬ್ರಾಹಿಂ ಆಸಿಫ್ ಹೊಟ್ಟೆನೋವಿಗೆ ಚಿಕಿತ್ಸೆಗಾಗಿ ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಆರೊಗ್ಯದಲ್ಲಿ ಏರುಪೇರಾಗಿ ಮಣೆಪಾಲ್ ಆಸ್ಪತ್ರೆಗೆ ದಾಖಲಿಸುವ ಮುನ್ನ ಮೃತಪಟ್ಟಿದ್ದಾರೆ. ಈ ಘಟನೆ ಗಮನಿಸಿದರೆ ಸೂಕ್ತ ಚಿಕಿತ್ಸೆ ನೀಡದೆ ಇಲ್ಲಿಯೇ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು.

ತನಿಖೆ ಪೂರ್ಣಗೊಳ್ಳುವವರೆಗೆ ಆಸ್ಪತ್ರೆಯ ಲೈಸೆನ್ಸ ರದ್ದು ಪಡಿಸಬೇಕು. ಇರ್ವರು ವೈದ್ಯರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೃತರ ಕುಟುಂಬಕ್ಕೆ ಸೂಕ್ತವಾದ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸುವಂತೆ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಗೃಹ, ಆರೋಗ್ಯ ಮತ್ತು ಜಿಲ್ಲಾ ಉಸ್ಯುವಾರಿ ಸಚೀವರಿಗೆ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ತಹಶೀಲ್ದಾರ ಮೂಲಕ ಮನವಿಯನ್ನು ಇದೇ ವೇಳೆ ಸಲ್ಲಿಸಲಾಯಿತು. ಹೊನ್ನಾವರ ತಹಶೀಲ್ದಾರ ರವಿರಾಜ್ ದಿಕ್ಷಿತ್ ಮನವಿ ಸ್ವೀಕರಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾಧ್ಯಮದವರೋಂದಿಗೆ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಮಹಮ್ಮದ್ ತೌಪಿಕ್ ಬ್ಯಾರಿ ಮಾತನಾಡಿ ಜಸ್ಟಿಸ್ ಫಾರ್ ಆಸಿಪ್ ಎಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ನ್ಯಾಯ ಕೇಳುತ್ತಿದ್ದೇವೆ. ಕುಟುಂಬಕ್ಕೆ ನ್ಯಾಯ ಸಿಗದೆ ಹೋದಲ್ಲಿ ಮುಂದಿನ ದಿನದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡುವುದಾಗಿ ( Massive protest) ಎಚ್ಚರಿಸಿದರು. ಖರ್ವಾ ಗ್ರಾಮ ಪಂಚಾಯತ ಸದಸ್ಯ ಇಬ್ರಾಹಿಂ ಸಾಬ್ ಮಾತನಾಡಿ ಬಹಳ ಸಲ ಇಂತಹ ಘಟನೆ ನಡೆದಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button