Important
Trending

Fire Accident : ಗ್ಯಾರೇಜಿಗೆ ಬೆಂಕಿ ತಗುಲಿ ಆತಂಕ

ಹೊನ್ನಾವರ: ಪಟ್ಟಣದ ಕರ್ನಲ್ ಹಿಲ್ ಸಮೀಪ ಗ್ಯಾರೇಜಿಗೆ ರಾತ್ರಿ ಬೆಂಕಿ ತಗುಲಿ (Fire Accident) ಕೆಲ ಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ. ರಾಷ್ಟೀಯ ಹೆದ್ದಾರಿ ಅಂಚಿನಲ್ಲಿರುವ ಈ ಗ್ಯಾರೇಜಿಗೆ ಏಕಾಏಕಿ ಬೆಂಕಿ ತಗುಲಿತ್ತು. ಬೆಂಕಿ ಜ್ವಾಲೆ ತೀವ್ರಗೊಂಡು ಸಮೀಪದ ಮರಗಳಿಗೆ ತಗುಲಿದ ಪರಿಣಾಮ ಸುತ್ತಲೂ ದಟ್ಟದಾದ ಹೊಗೆ ಜೊತೆ ಬೆಂಕಿ ಕ್ಷಣಮಾತ್ರದಲ್ಲಿ ಜಾಸ್ತಿಯಾಯಿತು. ಪ್ರಕಾಶ ಎನ್ನುವವರ ಅಂಗಡಿ ಇದ್ದಾಗಿದ್ದು, ಬೆಂಕಿ ತಗಲುವಿಕೆಗೆ ನಿಖರ ಕಾರಣ ತಿಳಿದಿಲ್ಲ.

ಸಮೀಪದಲ್ಲಿ ವಿದ್ಯುತ್ ಲೈನ್ ಇದ್ದು ಅಲ್ಲಿಂದ ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿ ಈ ಅವಘಡ (Fire Accident) ಸಂಭವಿಸಿದೆಯೇ ಎನ್ನುವುದು ತನಿಖೆಯ ಬಳಿಕ ತಿಳಿಯಬೇಕಿದೆ. ಬೆಂಕಿ ಜ್ವಾಲೆಗೆ ಗ್ಯಾರೇಜ್ ಪರಿಕರಗಳು ಸುಟ್ಟು ಹೋಗಿದ್ದು, ಅಗ್ನಿಶಾಮಕ ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ಸಂಭವಿಸದoತೆ ಜಾಗೃತಿ ವಹಿಸಿದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button