ಕಾರವಾರ: ಉತ್ತರಕನ್ನಡ ಜಿಲ್ಲೆ ಸಭ್ಯರ ಜಿಲ್ಲೆ ಅಂತಾನೇ ಹೆಸರುವಾಸಿ. ಇದೀಗ ಇಲ್ಲೂ ಕ್ರೈಮ್‌ಹೆಚ್ಚುತ್ತಿದೆ. ಅಪಾರ ಪ್ರಮಾಣದಲ್ಲಿ ಕೋಟಾ ನೋಟು ಚಲಾಯಿಸುತ್ತಿದ್ದ ಆರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಿಂಚಿನ ಕಕಾರ್ಯಾಚರಣೆ ನಡೆಸಿ ಖೋಟಾನೋಟು ವ್ಯವಹಾರ ಮಾಡುತ್ತಿದ್ದ 6 ಮಂದಿಯನ್ನು ಬಂಧಿಸಿ 4.5 ಲಕ್ಷ ಅಸಲಿ ನೋಟು ಜೊತೆಗೆ 72 ಲಕ್ಷ ಮೌಲ್ಯದ ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಮಹಾರಾಷ್ಟ್ರದ ಕಿರಣ ದೇಸಾಯಿ(40),ಬೆಳಗಾವಿಯ ಅಮರ ನಾಯ್ಕ(30), ಸಾಗರ ಕುಣ್ಣೂರ್ಕರ್(28), ದಾಂಡೇಲಿಯ ಶಬ್ಬೀರ್ ಕುಟ್ಟಿ(45) ಗಿರೀಶ ಪೂಜಾರಿ(42), , ಶಿವಾಜಿ ಕಾಂಬ್ಳೆ(52) ಆಗಿದ್ದು ಡಿಡಿಎಲ್ ವನಶ್ರೀ ಭಾಗದ ಶಿವಾಜಿ ಕಾಂಬ್ಳೆ ಎನ್ನುವವರ ಮನೆಯಲ್ಲಿ 4.5 ಲಕ್ಷ ಅಸಲಿ ನೋಟು ಪಡೆದು 9 ಲಕ್ಷ ಮೌಲ್ಯದ ನಕಲಿ ನೋಟು ನೀಡಲು ಮುಂದಾಗಿದ್ದ ವೇಳೆ ಈ ದಾಳಿ ನಡೆದಿದೆ.
ಈ ವೇಳೆ ನಕಲಿ ನೋಟು ಚಲಾವಣೆಗೆ ಬಳಸಿದ್ದ ಎರಡು ಕಾರು ಸಹ ವಶಪಡಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರಿದಿದೆ.
ವಿಸ್ಮಯ ನ್ಯೂಸ್ ದಾಂಡೇಲಿ