ಅಂಕೋಲಾದಲ್ಲಿಂದು ಪಾಸಿಟಿವ್ ಕೇಸ್ 15 : ಡೆತ್ ಕೇಸ್ 1+1? ವಾರಾಂತ್ಯದ ಲಾಕ್ ಡೌನ್: ಖಾಕಿ ತಡೆ ಇಲ್ಲದಿದ್ರೂ ಹಲವರ ಬೆಂಬಲ

ಅಂಕೋಲಾ ಜೂ 6: ತಾಲೂಕಿನಲ್ಲಿ ರವಿವಾರ 15 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು, ಒಟ್ಟೂ 158 ಪ್ರಕರರಣಗಳು ಸಕ್ರಿಯವಾಗಿದೆ. ಕಾರವಾರ ಕಿಮ್ಸ್ ಗೆ ದಾಖಲಾಗಿದ್ದ ತಾಲೂಕಿನ ಉಳುವರೆ ಮೂಲದ (56 )ರ ಸೋಂಕಿತ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ಈವರೆಗಿನ ಕೊವಿಡ್ ಸಾವಿನ ಪ್ರಕರಣಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಸೋಂಕು ಮುಕ್ತರಾದ ಓರ್ವರನ್ನು ಬಿಡುಗಡೆ ಗೊಳಿಸಲಾಗಿದ್ದು, ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ, ಧಾರವಾಡ, ಮಣಿಪಾಲ, ಮಂಗಳೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು33 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 16, ಹೋಂ ಐಸೋಲೇಶನ್ ನಲ್ಲಿ 109 ಜನರಿದ್ದಾರೆ. ಪ್ರತ್ಯೇಕ ಮತ್ತೊಂದು ಪ್ರಕರಣದಲ್ಲಿ ಅಚವೆ ವ್ಯಾಪ್ತಿಯ ಮಾಬಗಿಯ ಕೃಷಿ ಕೂಲಿ ಕೆಲಸಗಾರ ಕೃಷ್ಣ ವೆಂಕಟೇಶ ಮರಾಠಿ (34) ಮೃತಪಟ್ಟಿರುತ್ತಾನೆ. ಜೂನ್ 5ರಂದು ತನ್ನ ಮನೆಯಲ್ಲಿದ್ದ ಕೊಳೆನಾಶಕ ಔಷಧಿ ಸೇವಿಸಿ ಅಸ್ಪಸ್ಥನಾಗಿದ್ದ ಈತನನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ಕರೆತಂದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತ ಕೃಷ್ಣ ಮರಾಠಿ ಈ ಹಿಂದೆ ಅಕಾಲಿಕವಾಗಿ ತನ್ನ ಮಗ ಸಾವಿಗೀಡಾದ ನಂತರ ವಿಪರೀತ ಸರಾಯಿ ಕುಡಿತದ ಅಭ್ಯಾಸ ಮಾಡಿಕೊಂಡಿದ್ದನು ಎನ್ನಲಾಗಿದೆ.ಮಗನ ಸಾವಿನ ವಿಷಯ ಮನಸ್ಸಿಗೆ ಹಚ್ಚಿಕೊಂಡುಅಥವಾ ಇತರೆ ಕಾರಣಗಳಿಂದ ಜೀವನದಲ್ಲಿ ಬೇಸರಗೊಂಡು ಸಾವಿಗೆ ಶರಣಾಗಲು ಪ್ರಯತ್ನಿಸಿದಂತಿದೆ. ಪಿಎಸ್ಸೆ ಪ್ರೇಮನಗೌಡ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರೆಸಿದ್ದಾರೆ.

ಲಾಕ್ ಡೌನ್ ನಿಂದ ಜನಸಂಚಾರ ವಿರಳಗೊಂಡಿರುವುದು, ಕಡಿಮೆ ಪ್ರಮಾಣದಲ್ಲಿ ನಡೆಸುತ್ತಿರುವ ಗಂಟಲು ದ್ರವ ಪರೀಕ್ಷೆ, ಕೋವಿಡ್ ಲಸಿಕೆಯ ತಕ್ಕ ಮಟ್ಟಿನ ಪರಿಣಾಮ, ಸೋಂಕು ತಡೆಗೆ ಉಂಟಾದ ಜನಜಾಗ್ರತಿ ಮತ್ತಿತರ ಕಾರಣಗಳಿಂದ ಕರೊನಾ ಮಾರಿಯ ಆರ್ಭಟ ಕಡಿಮೆಯಾಗಿ, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎನ್ನಲಾಗಿದೆ.

ಕಳೆದ ಕೆಲ ದಿನಗಳಿಂದ ನಿರಂತರ ಕೆಲಸದ ಒತ್ತಡದ ನಡುವೆಯೂ ಬಹುತೇಕ ಪೋಲೀಸ್ ಹಾಗೂ ಗ್ರಹ ರಕ್ಷಕ ದಳದ ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿಭಾಯಿಸುತ್ತಿದ್ದು ಈ ಎಲ್ಲಾ ಕರೊನಾ ಸೇನಾನಿಗಳ ಕಾರ್ಯ ಮೆಚ್ಚಲೇ ಬೇಕಿದೆ. ಶುಕ್ರವಾರದಿಂದ 3 ದಿನಗಳ ಕಾಲ ವಾರಾಂತ್ಯದ ಲಾಕ್ ಡೌನ್ ಜಾರಿಯಲ್ಲಿದ್ದು, ಬಹುತೇಕ ನಾಗರಿಕರು ಮಾರುಕಟ್ಟೆ ಪ್ರದೇಶಕ್ಕೆ ಸಂಚರಿಸದೇ ತಮ್ಮ ಪ್ರಜ್ಞಾವಂತಿಕೆ ತೋರಿದಂತಿತ್ತು.

ಇದೇ ವೇಳೆ ಪೊಲೀಸ್ ಮತ್ತು ಗ್ರಹರಕ್ಷಕ ದಳದ ಸಿಬ್ಬಂದಿಗಳಿಲ್ಲದ ಬ್ಯಾರಿಕೇಡ್ ಅಳವಡಿಸಿದ 1-2 ಪ್ರದೇಶ, ಹಾಗೂ ಸರ್ಕಲ್ ಮತ್ತಿತರ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಗಳು ತಮ್ಮ ದಣಿವಾರಿಸಿಕೊಳ್ಳಲು ಅಥವಾ ಆಗಾಗ ಸುರಿವ ಮಳೆ ಇತರೇ ಕಾರಣದಿಂದ ದೂರವಿದ್ದ ವೇಳೆ, ಕೆಲ ನಾಗರಿಕರ ಅನಗತ್ಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗಿ ವಾಹನ ಸವಾರರು ಲಾಕ್ ಡೌನ್ ಭಯವಿಲ್ಲದೇ, ಇತ್ತ ಸಾಮಾಜಿಕ ಕಳಕಳಿ ಯೂ ಇಲ್ಲದೇ ಮನಸ್ಸಿಗೆ ಬಂದಂತೆ ಒಡಾಡುತ್ತಿರುತ್ತದಕ್ಕೆ ಪ್ರಜ್ಞಾವಂತ ವಲಯದಿಂದ ಆಕ್ಷೇಪ ಕೇಳಿಬಂದಂತಿತ್ತು.

ರವಿವಾರ ಕೆಲಹೊತ್ತು ಕಾರ್ಯಾಚರಣೆಗಿಳಿದ ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್ಐ ಗಳಾದ ಈ ಸಿ ಸಂಪತ್, ಪ್ರೇಮನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕೆಲ ವಾಹನ ಸವಾರರನ್ನು ತಡೆದು, ಅನಗತ್ಯವಾಗಿ ಸಂಚರಿಸುವವರ ವಿರುದ್ಧ ದಂಡ ವಿಧಿಸಿಎಚ್ಚರಿಸಿದರು.
ಪುರಸಭೆ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಗೌಡ ಅಂಬಾರಕೊಡ್ಲ ತನ್ನ ವಾರ್ಡಿನ ಕೆಲ ಕಡುಬಡವರಿಗೆ ಆಹಾರ ದಿನಸಿ ಕಿಟ್ ವಿತರಿಸಿದರು.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version