Focus News
Trending

ಅಮೆರಿಕಾದ ನ್ಯಾಯಾಂಗದಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಕುಮಟಾದ ಯುವತಿ: ಈಕೆಯ ಸಾಧನೆಗೆ ಅಭಿನಂದನೆ ಸಲ್ಲಿಸಿ

ಕುಮಟಾ: ಉತ್ತರಕನ್ನಡದ ಯುವತಿಯೊಬ್ಬಳು ಅಮೆರಿಕಾದಲ್ಲಿ ಸಾಧನೆ ಮಾಡಿ, ಕರ್ನಾಟಕದ ಮತ್ತು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಹೌದು, ಜಿಲ್ಲೆಯ ಕುಮಟಾ ಮೂಲದ ಕಡೇಕೋಡಿಯ ಯುವತಿಯೊಬ್ಬಳು ಅಮೇರಿಕಾದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್‌ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾಳೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೋಡಿಯ ಕು.ದಿಶಾ ಭಾಗವತ್ ಈ ಅನುಪಮ ಸಾಧನೆ ಮಾಡಿದ ಯುವತಿ.

ಈಕೆ ಮೂಲತ: ಕುಮಟಾದವರಾದ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ, ದಿಶಾ ಎಂಟರ್ ಪ್ರೈಸಸ್ ಮಾಲೀಕ ಮಂಜುನಾಥ ಭಾಗವತ್, ಲಲಿತಾ ಭಾಗವತ್ ದಂಪತಿ ಪುತ್ರಿ. ಬೆಂಗಳೂರಿನ ಕ್ರೈಸ್ತ ಕಾಲೇಜಿನಲ್ಲಿ ಎಲ್‌ಎಲ್ ಬಿ ಪೂರ್ಣಗೊಳಿಸಿದ ದಿಶಾ, ಅಮೇರಿಕಾದಲ್ಲಿ ಯುಎಸ್‌ಸಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಇದೀಗ ಕ್ಯಾಲೇಫೋರ್ನಿಯಾ ಬಾರ್ ಕೌನ್ಸಿಲ್ ನಡೆಸುವ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಟಾರ್ನಿಯಾಗಿ ನಿಯುಕ್ತಿಗೊಂಡಿದ್ದಾಳೆ.

ಮೂಲತ: ಕುಮಟಾದ ಯುವತಿ ಅಮೆರಿಕಾದ ನ್ಯಾಯಾಂಗ ಇಲಾಖೆಯ ಉನ್ನತ ಹುದ್ದೆಯಲ್ಲಿ ನಿಯುಕ್ತಿಗೊಂಡಿರುವುದಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿ, ಶುಭಕೋರಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button