Important
Trending

ಹುಲಿ ಅಥವಾ ಚಿರತೆ ದಾಳಿ: ಮೂರು ಜಾನುವಾರುಗಳ ಸಾವು

ಜೊಯಿಡಾ: ಹುಲಿ ಅಥವಾ ಚಿರತೆ ದಾಳಿಯಿಂದಾಗಿ ಗಾಂಗೊಡಾದಲ್ಲಿ 3 ಜಾನುವಾರುಗಳು ಸಾವನ್ನಪ್ಪಿದ್ದು, ಇಲ್ಲಿನ ಸಾರ್ವಜನಿಕರು ಆತಂಕಗೊoಡಿದ್ದಾರೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ವನ್ಯ ಜೀವಿ ವಲಯ ವ್ಯಾಪ್ತಿಗೆ ಈ ಪ್ರದೇಶ ಬರುತ್ತಿದ್ದು, ಕೂಡಲೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಕುಂಬಾರವಾಡಾ ಎಸಿಎಪ್ ಅಮರಾಕ್ಷ ಎ ಮತ್ತು ಪಣಸೋಲಿ ವಲಯ ಅರಣ್ಯಾಧಿಕಾರಿ ರಶ್ನಿ ದೇಸಾಯಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಕ್ಯಾಮರಾ ಅಳವಡಿಸಿ ಹುಲಿಯೋ ಅಥವಾ ಚಿರತೆಯೋ ಪತ್ತೆ ಮಾಡುವ ಕಾರ್ಯವನ್ನು ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button