Important
Trending

ಹೃದಯಾಘಾತದಿಂದ 27 ವರ್ಷದ ಅತಿಥಿ ಉಪನ್ಯಾಸಕಿ ಸಾವು

ಕಾರವಾರ: ಹೃದಯಾಘಾತದಿಂದ 27 ವರ್ಷದ ಅತಿಥಿ ಉಪನ್ಯಾಸಕಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಅನುಷಾ ಶೆಟ್ಟಿ (27) ಹೃದಯಾಘಾತದಿಂದ ಮೃತಪಟ್ಟ ಯುವತಿ. ಈಕೆ ಕಾರವಾರ ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮುರ್ಡೇಶ್ವರ ಜಾತ್ರೆಯಲ್ಲಿ ಚಿಕ್ಕ ಮಕ್ಕಳನ್ನು ಟಾರ್ಗೆಟ್ ಮಾಡಿ ಸರಗಳ್ಳತನ: ಆರೋಪಿ ಅಂದರ್

ಕಳೆದ 6 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಕರ್ತವ್ಯ ನಿರತ ವೇಳೆಯಲ್ಲಿಯೇ ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button