ಮುರ್ಡೇಶ್ವರ ಜಾತ್ರೆಯಲ್ಲಿ ಚಿಕ್ಕ ಮಕ್ಕಳನ್ನು ಟಾರ್ಗೆಟ್ ಮಾಡಿ ಸರಗಳ್ಳತನ: ಆರೋಪಿ ಅಂದರ್

ಮುರ್ಡೇಶ್ವರ : ಚಿಕ್ಕಮಕ್ಕಳನ್ನೆ ಟಾರ್ಗೇಟ್ ಮಾಡಿ ಮುರ್ಡೇಶ್ವರ ಜಾತ್ರೆಯಲ್ಲಿ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ ಮೂಲದ ಖತರ್ನಾಕ ಕಳ್ಳರನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ ಮೂಲದ ಶಿವಾಜಿ, ಶ್ಯಾಮರಾವ್ ಭೀಮರಾವ್ ಜಾದವ, ಅರ್ಜುನ್ ಶುಕ್ಲಾ ಬಂಧಿತರು. ತಾಲೂಕಿನ ಮುರ್ಡೇಶ್ವರ ಜಾತ್ರೆಗೆ ಬಂದಿದ್ದ ತಾಯಿಯೊಂದಿಗೆ ಇದ್ದ ಮಕ್ಕಳನ್ನು ಇವರು ಟಾರ್ಗೆಟ್ ಮಾಡಿ, ಸರ ಎಗರಿಸಲು ಪ್ಲಾನ್ ಮಾಡಿದ್ದರು. ರಥೋತ್ಸವದ ಸಂದರ್ಭದಲ್ಲಿ ಸುಮಾರು 3 ವರ್ಷದ ಬಾಲಕ ಮತ್ತು 6ವರ್ಷದ ಬಾಲಕಿಯ ಸರ ಎಗರಿಸಿದ್ದರು.

ಸರವನ್ನು ಕದ್ದು ಪರಾರಿಯಾಗುತ್ತಿದ್ದವರನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಸರವನ್ನು ಎಗರಿಸಿ ಪರಾರಿಯಾಗಿದ್ದ ಮತ್ತೊರ್ವ ಕಳ್ಳನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.

ವಿಸ್ಮಯ ನ್ಯೂಸ್, ಮುರ್ಡೇಶ್ವರ

Exit mobile version