Follow Us On

Google News
Important
Trending

Gokarna News: ಗಾಂಜಾ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಯುವತಿಯರು

ಗೋಕರ್ಣ: ( Gokarna News) ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಪೊಲೀಸ್ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಪ್ರವಾಸಿಗರು ಮಹಾಬಲೇಶ್ವರ ದೇವಸ್ಥಾನದ ಬಳಿ ಕರ್ತವ್ಯದಲ್ಲಿದ್ದ ಲೇಡಿ ಪೊಲೀಸ್ ಕಾಲಿಗೆ ಬೈಕ್ ತಾಗಿಸಿದ್ದಾರೆ. ಆಕಸ್ಮಿಕವಾಗಿ ತಾಗಿರಬಹುದು ಎಂದು ತಿರುಗಿ ನೋಡಿದಾಗ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿರುವುದನ್ನು ಗಮನಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗ ಹುಡುಕುತ್ತಾ ಇದ್ದೀರಾ? ಇಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.

ಹೀಗಾಗಿ ಮಹಿಳಾ ಪೇದೆ ಹೆಚ್ಚಿನ ಜನಸಂದಣಿ ಇರುವುದರಿಂದ ಈ ಪ್ರವಾಸಿಗರ ಸ್ಕೂಟಿಯನ್ನು ಹಿಂಬಾಲಿಸಿದ್ದಾರೆ. ಬೈಕ್ ಅನ್ನು ನಿಧಾನ ಓಡಿಸಿ ಎಂದು ತಿಳಿ ಹೇಳಲು ಮುಂದಾದಾಗ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಪ್ರವಾಸಿಗರನ್ನು ತಡೆದು ಪೊಲೀಸರನ್ನು ರಕ್ಷಿಸಿದ್ದಾರೆ. ನಂತರ ಇಬ್ಬರನ್ನುವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದು ವಿಚಾರಣೆ ತೀವ್ರ ಗೊಳಿಸಿದ್ದಾರೆ.

( Gokarna News) ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಹೊರರಾಜ್ಯದವರು ಎನ್ನಲಾದ ಯುವತಿಯರು ಗಾಂಜಾ ಮತ್ತಿನಲ್ಲಿರುವುದೇ ಈ ಹಲ್ಲೆಗೆ ಕಾರಣವಾಗಿದೆ. ಪಿಎಸ್‌ಐ ಖಾದರ್ ಬಾಷಾ ವಿಚಾರಣೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button
Idagunji Mahaganapati Chandavar Hanuman