ಕುಮಟಾ: ಕುಮಟಾ ತಾಲೂಕಾಡಳಿತ ಮತ್ತು ಪುರಸಭೆಯ ಸಾರ್ವಜನಿಕ ಪ್ರಕಟಣೆ, ಪಟ್ಟಣದ ನಾಗರೀಕ ಬಂಧುಗಳೇ, ಕರೋನಾ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಔಷದಿ ಅಂಗಡಿ ಹೊರತುಪಡಿಸಿ ಬೆಳಿಗ್ಗೆ 7. ಗಂಟೆಯಿಂದ ಸಂಜೆ 6. ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಅಂಗಡಿಕಾರರರಿಗೆ ಮತ್ತು ಸಾರ್ವಜನಿಕರಿಗೆ ಸಾಮಾಜಿಕ ಅಂತರವನ್ನು ಖಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಯಪಡಿಸಿದೆ. ಪಟ್ಟಣದ ಎಲ್ಲಾ ರೀತಿಯ ಅಂಗಡಿಕಾರರಿಗೆ ಉದ್ದಿಮೆ ಪರವಾನಿಗೆಯನ್ನು ಪುರಸಭೆಯಿಂದ ಪಡೆದುಕೊಳ್ಳುವುದನ್ನು ಕಡ್ಡಾಯಗೋಳಿಸಲಾಗಿರುತ್ತದೆ. ಸಂಜೆ 7. ಗಂಟೆ ನಂತರ ಬೆಳಿಗ್ಗೆ 7. ಗಂಟೆಯವರೆಗೆ ಸಾರ್ವಜನಿಕರು ವೈದ್ಯಕೀಯ ಕಾರಣ ಹೊರತುಪಡಿಸಿ ಪಟ್ಟಣದಲ್ಲಿ ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಾನುವಾರ ಮಾತ್ರ ಔಷಧಿ ಅಂಗಡಿ ಹೊರತುಪಡಿಸಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಇಡುವಂತೆ ಆದೇಶಿಸಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಆದೇಶವನ್ನು ಉಲ್ಲಂಘಿಸಿದರೆ ಅಥವಾ ಸಹಕರಿಸದೇ ಇದ್ದಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಹಾಗೂ ಇಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಇದಕ್ಕೆ ಆಸ್ಪದ ಕೊಡದೇ ಕೊರೋನಾ ನಿಯಂತ್ರಿಸಲು ಸಹಕರಿಸುವಂತೆ ವಿನಂತಿಸಿದೆ.
Read Next
Important
Saturday, June 28, 2025, 11:11 AM
ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ: ಏನಾಯ್ತು ನೋಡಿ?
Important
Saturday, June 28, 2025, 9:58 AM
ಅಂಗಡಿ ಕೆಲಸಕ್ಕೆ ಹೋದ ಯುವತಿ ನಾಪತ್ತೆ
Important
Saturday, June 28, 2025, 9:56 AM
ವಿದ್ಯುತ್ ಶಾಕ್ ನಿಂದ ಮೃತಪಟ್ಟ ಹೊನ್ನಾವರ ಪಟ್ಟಣದ ಮಹಿಳೆ
Important
Friday, June 27, 2025, 10:26 AM
ಗೊಬ್ಬರ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವು
Saturday, June 28, 2025, 11:11 AM
ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ: ಏನಾಯ್ತು ನೋಡಿ?
Saturday, June 28, 2025, 9:58 AM
ಅಂಗಡಿ ಕೆಲಸಕ್ಕೆ ಹೋದ ಯುವತಿ ನಾಪತ್ತೆ
Saturday, June 28, 2025, 9:56 AM
ವಿದ್ಯುತ್ ಶಾಕ್ ನಿಂದ ಮೃತಪಟ್ಟ ಹೊನ್ನಾವರ ಪಟ್ಟಣದ ಮಹಿಳೆ
Friday, June 27, 2025, 10:26 AM
ಗೊಬ್ಬರ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವು
Related Articles

ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು : ಆಟ ಪಾಠಗಳಲ್ಲಿ ಮುಂದಿದ್ದ ಯುವತಿಗೆ ಬೇಸರವಾಯಿತೇ ಜೀವನ ?
Wednesday, June 25, 2025, 12:11 PM

ಪೊಲೀಸ್ ಇಲಾಖೆಯಿಂದ ಮುಕ್ತ ಆನ್ ಲೈನ್ ಚಿತ್ರಕಲಾ ಸ್ಪರ್ಧೆ: ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳೇ ಸಿದ್ದರಾಗಿ
Sunday, June 22, 2025, 7:55 PM

Monsoon Offer: ಮಂದಾರ ಎಲೈಟ್ ಫಂಕ್ಷನ್ ಹಾಲ್: ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮಗಳಿಗಾಗಿ ಬುಕ್ಕಿಂಗ್ ಮಾಡಿ
Thursday, June 19, 2025, 3:43 PM

ರೈಲ್ವೆ ಸುರಂಗ ಮಾರ್ಗದ ಬಳಿ ಪತ್ತೆಯಾಗಿತ್ತು ಅಪರಿಚಿತ ಪುರುಷ ಮೃತ ದೇಹ : ಛಿಧ್ರ ವಿಧ್ರವಾಗಿದ್ದ ದೇಹ ಗುರುತಿಸಲು ಹೊರಡಿಸಲಾಗಿತ್ತು ಪೋಲಿಸ್ ಪ್ರಕಟಣೆ
Thursday, June 19, 2025, 9:50 AM
Check Also
Close - ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನSunday, June 15, 2025, 4:36 PM