ದಾಂಡೇಲಿ: ಸಾಮಾನ್ಯವಾಗಿ ನಾಯಿ ದಾಳಿ ಮಾಡೋದನ್ನು ಕೇಳಿದ್ದೇವೆ. ಆದ್ರೆ, ಇಲ್ಲಿ ವಿಚಿತ್ರ ಅಂದರೆ ದನಗಳು ದಾಳಿ ಮಾಡಿವೆ. ಹೌದು, ಇಲ್ಲಿಯ ವನಶ್ರೀನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಯೊಬ್ಬನ ಮೇಲೆ ಬಿಡಾಡಿ ದನಗಳು ಮುಗಿಬಿದ್ದಿವೆ. ಅಲ್ಲದೆ, ಅಟ್ಟಿಸಿಕೊಂಡು, ತಿವಿದು ಗಾಯಗೊಳಿಸಿದೆ.
ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಮೂರ್ನಾಲ್ಕು ಬಿಡಾಡಿ ದನಗಳು ಮೈಮೇಲೆ ಮುಗಿಬಿದ್ದಿದೆ. ಕೊಂಬಿನಿoದ ತಿವಿದಿದೆ. ಬಿಡಾಡಿ ದನಗಳ ದಾಳಿಗೊಳಗಾಗಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 4-5 ಜನರು ಸೇರಿ ಬಿಡಾಡಿ ದನಗಳನ್ನು ಅಲ್ಲಿಂದ ಓಡಿಸಿದ್ದಾರೆ.
ಗಾಂಧಿನಗರದ ಆಶ್ರಯ ಕಾಲೋನಿ ನಿವಾಸಿಯಾಗಿರುವ 64 ವರ್ಷ ವಯಸ್ಸಿನ ಚೌಡಪ್ಪ ಮಾಶಾಳ ಬಿಡಾಡಿ ದನಗಳಿಂದ ಗಾಯಗೊಂಡಿರುವವರು. ಇವರು ವನಶ್ರೀನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಮೂರ್ನಾಲ್ಕು ಬಿಡಾಡಿ ದನಗಳು ಮೈಮೇಲೆ ಎರಗಿ ಗಾಯಗೊಳಿಸಿದೆ. ಸಮಯಕ್ಕೆ ಸರಿಯಾಗಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಹಲ್ಲೆಯಿಂದ ಹಾಗೂ ಕೊಂಬಿನಿoದ ತಿವಿದಿರುವುದರಿಂದ ಪಕ್ಕೆಲುಬು ಮುರಿದಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್