Follow Us On

WhatsApp Group
Important
Trending

ನಟ ಅರ್ಜುನ್​ ಸರ್ಜಾ ಅವರಿಂದ ಮುರುಡೇಶ್ವರದ ಯುವಕರಿಗೆ ಸನ್ಮಾನ: ಯಾಕಾಗಿ ನೋಡಿ?

ಭಟ್ಕಳ: ವಾಯುಪುತ್ರ ಹನುಮಂತನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ನಟ ಅರ್ಜುನ್​ಸರ್ಜಾ, ಕೊನೆಗೂ ತಾವು ಕಂಡಿದ್ದ ಕನಸು ಈಡೇರಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ನೆರವೇರಿದೆ. ಈ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಾರಕೆತ್ತನೆ ಮಾಡಿದ್ದು ಮುರುಡೇರ್ಶವರದ ಯುವಕರು.

ಹೌದು, ಹೀಗಾಗಿ ಸುಂದರವಾಗಿ ದ್ವಾರಕೆತ್ತನೆ ಮಾಡಿಕೊಟ್ಟ ಮುರುಡೇಶ್ವರದ ಸತೀಶ ದೇವಾಡಿಗ ಅವರ ತಂಡಕ್ಕೆ ನಟ ಅರ್ಜುನ್ ಸರ್ಜಾ ಸನ್ಮಾನಿಸಿ ಧನ್ಯವಾದ ತಿಳಿಸಿದ್ದಾರೆ.

ಮುರ್ಡೇಶ್ವರದ ಸತೀಶ ದೇವಾಡಿಗ ತಂಡದ ಯುವ ಶಿಲ್ಪಿಗಳಾದ ವಿಜಯ್ ನಾಯ್ಕ ಭಟ್ಕಳ, ಭರತ್ ನಾಯ್ಕ ಕೊಡ್ಸುಳು, ಶರತ್ ನಾಯ್ಕ ಕೊಡ್ಸುಳು, ನಾಗರಾಜ್ ನಾಯ್ಕ ಮಾವಿನಕಟ್ಟೆ ಮತ್ತು ತಂಡದವರಿಗೆ ಅರ್ಜುನ್ ಸರ್ಜಾ ಮತ್ತು ಸರ್ಜಾ ಕುಟುಂಬದವರು ಗೌರವ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button