Follow Us On

WhatsApp Group
Big News
Trending

ಮಾರುಕಟ್ಟೆಗೆ ಬಂತು ಆಯುರ್ವೇದಿಕ್ ಮಾಸ್ಕ್

ಗಿಡಮೂಲಿಕೆಯಿಂದ ತಯಾರಾಗಿದೆ ಈ ಮುಖಗವಚ
ಸುಗಂದಭರಿತ ಲಾವಂಚಬೇರಿನಿಂದ ತಯಾರಿ
ಅತ್ಯಂತ ಕಡಿಮೆದರ, ಅತಿಹೆಚ್ಚಿ ಬಾಳಿಕೆ

ಭಟ್ಕಳ: ಸುಗಂಧಭರಿತ ಆಯುರ್ವೇದ ಗಿಡಮೂಲಿಕೆಯ ಲಾವಂಚ ಬೇರಿನ (ಮಾಸ್ಕ್)ಗಳನ್ನು ತಯಾರಿಸುವಲ್ಲಿ ತಾಲೂಕಿನ ಬಂಗಾರ ಮಕ್ಕಿಯಲ್ಲಿರುವ ಬೆಂಗ್ರೆ ಉಸಿರಾ ಇಂಡಸ್ಟ್ರೀಸ್ ಯಶಸ್ವಿಯಾಗಿದೆ. ಕೈಗಾರಿಕಾ ಘಟಕದಲ್ಲಿ ಸುಗಂಧ ಭರಿತ ಆಯುರ್ವೇದ ಗಿಡಮೂಲಿಕೆಯ ಲಾವಂಚ ಬೇರಿನ ಮುಖಗವಸುಗಳನ್ನು ತಯಾರಿಸಲಾಗುತ್ತಿದೆ. ಆಯುರ್ವೇದ ಗುಣಗಳನ್ನು ಹೊಂದಿರುವ ಲಾವಂಚದ ಬೇರಿನಿಂದ ಸಿದ್ಧಪಡಿಸಿದ ಈ ಮುಖಗವಸು ಧರಿಸುವುದರಿಂದ ಅತೀ ಸೂಕ್ಷ್ಮ ರೋಗಾಣುಗಳನ್ನು ತಡೆಗಟ್ಟಬಹುದು ಹಾಗೂ ಅತೀ ದೀರ್ಘಕಾಲದವರೆಗೂ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಕಳೆದ ೨೨ ವರ್ಷಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿಕೊಂಡು ಬರುತ್ತಿದ್ದು, ಈ ಸಮಯಕ್ಕೆ ತಕ್ಕಂತೆ ಮುಖ ಮತ್ತು ಬಾಯಿ ಮುಚ್ಚುವಂತಹ ಮಾಸ್ಕಗಳನ್ನು ತಯಾರಿಸುವಲ್ಲಿ ಇವರು ಮುಂದಾಗಿದ್ದಾರೆ. ಕೊರೊನಾ ವೈರಸ್ನಿಂದಾಗಿ ಸಾವಿನ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಭೀತಿಯಿಂದ ಇದೀಗ ನೈಸರ್ಗಿಕವಾಗಿ ಸಿಗುವ ಲಾವಂಚದ ಬೇರುಗಳನ್ನು ಸಂಸ್ಕರಿಸಿ ಮುಖಗವಸು ತಯಾರಿ ತಾಲೂಕಿನ ಜನರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆಯುರ್ವೇದ ಗುಣಗಳನ್ನು ಹೊಂದಿರುವ ಲಾವಂಚದ ಬೇರಿನಿಂದ ಸಿದ್ಧಪಡಿಸಿದ ಈ ಮುಖಗವಸು ಧರಿಸುವುದರಿಂದ ಅತೀ ಸೂಕ್ಷ್ಮ ರೋಗಾಣುಗಳನ್ನು ತಡೆಗಟ್ಟಬಹುದು ಹಾಗೂ ಅತಿ ದೀರ್ಘ ಕಾಲದವರೆಗೂ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಈ ಉಸಿರಾ ಇಂಡಸ್ಟ್ರೀಸ್ ಮಾಲೀಕರಾದ ಎಂ. ಮ್ಯಾಥ್ಯೂ ಅವರು ಮಾತನಾಡಿ ನಾವು ಸತತ ೨೨ ವರ್ಷಗಳಿಂದ ಕರಕುಶಲ ವಿನ್ಯಾಸಗಳನ್ನು ತಯಾರಿಸಿ ಬಳಕೆಗೆ ನೀಡುತ್ತಾ ಬಂದಿರುತ್ತೇವೆ. ಕೊರೊನಾ ಸಂದರ್ಭದಲ್ಲಿ ಮಾಸ್ಕ್ನ ಬಳಕೆ ಅವಶ್ಯಕವಾದದ್ದನ್ನು ಮನಗಂಡು ನಾವು ಲಾವಂಚದ ಬೇರುಗಳನ್ನು ಉಪಯೋಗಿಸಿ ಮಾಸ್ಕ ತಯಾರಿಸಿದ್ದೇವೆ. ಅದರ ಉಪಯೋಗ ಪಡೆಯಲು ಹತ್ತಿರದ ಜನರಿಗೆ ಕೊಟ್ಟಿದ್ದೇವೆ. ಉಪಯೋಗಿಸದವರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇದನ್ನು ಆರು ತಿಂಗಳಿAದ ಒಂದು ವರ್ಷದವರೆಗೂ ಬಳಕೆ ಮಾಡಬಹುದಾಗಿದೆ. ಕಡಿಮೆ ಮೊತ್ತದ ಮಾಸ್ಕ್ಗಳು ಲಭ್ಯವಿದ್ದು, ೧೦೦ ರಿಂದ ೧೫೦ ರೂಪಾಯಿ ಬೆಲೆಗೆ ಡಬಲ್ ಲೇಯರ್ ಮಾಸ್ಕ್ಗೆ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಮಾಸ್ಕ್ ಧರಿಸಿದ ಬಳಿಕ ಸ್ವಚ್ಛಮಾಡಿ ಬಳಸಬಹುದು. ಮಾಸ್ಕ್ ಬಳಕೆಯ ನಂತರ ಸಾಬೂನು ಮತ್ತು ಬಿಸಿ ನೀರಿನಲ್ಲಿ ತೊಳೆಯಬೇಕು. ಸೂರ್ಯನ ಬೆಳಕಿನಲ್ಲಿ ಕನಿಷ್ಠ ೨ ಗಂಟೆ ಒಣಗಿಸಬೇಕು. ಸೂರ್ಯನ ಬೆಳಕು ಇಲ್ಲ ಎಂದಾದಲ್ಲಿ, ಕುಕ್ಕರ್ನಲ್ಲಿ ನೀರಿನೊಂದಿಗೆ ಹಾಕಿ ಹತ್ತು ನಿಮಿಷ ಕುದಿಸಿ, ಬೆಚ್ಚಗಿನ ಗಾಳಿಯ ಸಂಪರ್ಕಕ್ಕೆ ಇಡಬೇಕಾಗುತ್ತದೆ

– ಎಂ. ಮ್ಯಾಥ್ಯೂ, ಮಾಲೀಕರು, ಉಸಿರಾ ಇಂಡಸ್ಟ್ರೀಸ್,

[sliders_pack id=”1487″]

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button