ಮಾಹಿತಿ
Trending

ಅಂಕೋಲಾ ಬಿಜೆಪಿ ವಿವಿಧ ಮೋರ್ಚಾ & ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರ ನೇಮಕ

ಅಂಕೋಲಾ : ಭಾರತೀಯ ಜನತಾ ಪಾರ್ಟಿ ಅಂಕೋಲಾ ತಾಲೂಕು ಮಂಡಲದ ವಿವಿಧ ಮೋರ್ಚಾ ಮತ್ತು ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರ ನೇಮಕಾತಿ ನಡೆಸಿ, ತಾಲೂಕಾ ಬಿಜೆಪಿ ಅಧ್ಯಕ್ಷರಾದ ಸಂಜಯ ಎಂ. ನಾಯ್ಕ ಅವರು ಪಟ್ಟಿ ಬಿಡುಗಡೆ ಗೊಳಿಸಿದ್ದಾರೆ.

ತಾಲೂಕ ಯುವಮೋರ್ಚಾ ನೂತನ ಅಧ್ಯಕ್ಷರಾಗಿ ಸಂತೋಷ ಭಾಸ್ಕರ ನಾರ್ವೇಕರ ಕಲಭಾಗ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸವಿತಾ ಕೃಷ್ಣ ಬಾನಾವಳಿಕರ ಬೇಲೇಕೇರಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಾಗಿ ರಾಘು ನಾಯ್ಕ ಹಟ್ಟಿಕೇರಿ, ರೈತ ಮೋರ್ಚಾ ಅಧ್ಯಕ್ಷರಾಗಿ ವಿ.ಎಸ್.ಭಟ್ಟ ಹಳವಳ್ಳಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಪೈರೋಜ್ ಶೇಖ ಅಂಕೋಲಾ, ಎಸ್ಸಿ (ಪರಿಶಿಷ್ಟ ಜಾತಿ) ಮೋರ್ಚಾ ಅಧ್ಯಕ್ಷರಾಗಿ ವಿನೋದ ಆಗೇರ ಅವರ್ಸಾ, ಎಸ್.ಟಿ (ಪರಿಶಿಷ್ಟ ಪಂಗಡ) ಮೋರ್ಚಾ ಅಧ್ಯಕ್ಷರಾಗಿ ಏಸು ಪುಟ್ಟಾ ಸಿದ್ದಿ ಅಂಗಡಿಬೈಲ್ ಇವರನ್ನು ನೇಮಕಮಾಡಲಾಗಿದೆ.

ಅವರ್ಸಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮಹಾದೇವ ತಳೇಕರ, ಅಗಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಗಿ ಎಂ.ಎಸ್.ಭಟ್ಟ ಅಚವೆ, ಅಂಕೋಲಾ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ನಾಗೆಂದ್ರ (ಗೋಪಾಲಕೃಷ್ಣ) ಚೆನ್ನಪ್ಪಾ ನಾಯ್ಕ ಕಲಭಾಗ, ಶೆಟಗೇರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಶಾಂತಾ ಹರಿಕಾಂತ ಬಿಳಿಹೊಂಯ್ಗಿ ಇವರನ್ನು ನೇಮಕ ಮಾಡಿ ಬುಧವಾರ ತಾಲೂಕಾ ಅಧ್ಯಕ್ಷ ಸಂಜಯ ಎಂ. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Back to top button