Focus News
Trending

ಭಟ್ಕಳದಲ್ಲಿ 60 ಲಕ್ಷ ಮೌಲ್ಯದ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿ ವಶಕ್ಕೆ

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಸಿಕ್ಕಬಿದ್ದರು
ಠಾಣೆಗೆ ಕರೆತಂದ ವೇಳೆ ಸತ್ಯ ಬಯಲು

ಭಟ್ಕಳ : ತಾಲೂಕಿನ ನಗರ ಠಾಣೆ ವ್ಯಾಪ್ತಿಯ ಮುಖ್ಯ ರಸ್ತೆ ಹೂವಿನ ಚೌಕ ಕ್ರಾಸ್ ಸಮೀಪ ಬುಧವಾರ ರಾತ್ರಿ 60 ಲಕ್ಷ ಮೌಲ್ಯದ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿ ವಶಕ್ಕೆ ಪಡೆದಿದ್ದು ಇಬ್ಬರು ಆರೋಪಿಗಳನ್ನು ಭಟ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.©Copyright reserved by Vismaya tv

ಬಂಧಿತ ಆರೋಪಿ ಶೈಲೇಶ ಮಾಹಾದೇವ ಪಾಟೀಲ (33) ಹಾಗೂ ಸಂಜಯ ದೇಶಮುಖ ಎಂದು ತಿಳಿದು ಬಂದಿದ್ದು , ಇಬ್ಬರು ಆರೋಪಿತರು ಹುಬ್ಬಳ್ಳಿ ಮೂಲದವರು ಎಂದು ತಿಳಿದು ಬಂದಿದೆ .ನಿನ್ನೆ ರಾತ್ರಿ ಕೆಎ-51 ಎಮ್. ಜೆ-1092 ನಂಬರ ಕಾರಿನಲ್ಲಿ ಸುಮಾರು ಲಕ್ಷ ಮೌಲ್ಯದ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿಗಳನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ಮಾರಾಟಕ್ಕೆ ಹೋಗುವಾಗ ಸಂಶಯಾಸ್ಪದವಾಗಿ ತಿರುಗುತ್ತಿರುವಾಗ ನಗರ ಠಾಣೆಯ ಪಿ.ಎಸ್.ಐ ಭರತ್ ಕುಮಾರ ಹಾಗೂ ಸಿಬ್ಬಂದಿಗಳಾದ ಕೃಷ್ಣನಂದ ನಾಯ್ಕ, ಮಾಳಪ್ಪ , ಬಸವಣಿಪ್ಪಾ ಜಕಾತಿ, ಅಣ್ಣಪ್ಪ ನಾಯ್ಕ ವಿಚಾರಣೆ ನಡೆಸಿದಾಗ ಚಿನ್ನಾಭರಣ ಇರುವುದು ತಿಳಿದು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿ, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button