Important

Fishing: ಮೀ‌ನುಗಾರಿಕೆಗೆ ತೆರಳಿದ ವೇಳೆ ಓರ್ವ ನಾಪತ್ತೆ: ಈಜಿ ದಡ ಸೇರಿದ ಇನ್ನೊರ್ವ ಯುವಕ

ಹೊನ್ನಾವರ: ಮೀನುಗಾರಿಕೆಗೆ (Fishing) ತೆರಳಿದ್ದ ವೇಳೆ ಓರ್ವ ನಾಪತ್ತೆಯಾಗಿ ಇನ್ನೊರ್ವ  ಈಜಿ ದಡ ಸೇರಿದ ಘಟನೆ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಸಮೀಪ ನಡೆದಿದೆ. ತಾಲೂಕಿನ ಕಾಸರಕೋಡನಲ್ಲಿ ಮೀನುಗಾರ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ಮುಂಜಾನೆ ಸಂಭವಿಸಿದೆ. ಕಾಸರಕೋಡನ ಇಬ್ಬರು ಮೀನುಗಾರರು ದೋಣಿ ಮೂಲಕ ಮೀನುಗಾರಿಕೆ  ತೆರಳಿದಾಗ ಆಕಸ್ಮಿಕವಾಗಿ ದೋಣಿ ಮುಳುಗಿ ಪ್ರಜ್ವಲ್ ಮಾಬ್ಲ ಖಾರ್ವಿ ನಾಪತ್ತೆಯಾದ ಯುವಕನಾಗಿದ್ದು, ಇನ್ನೋರ್ವ ಮೀನುಗಾರರಾದ ರಾಜು ಶೇಷಗಿರಿ ತಾಂಡೇಲ್ ಅಪಾಯದಿಂದ ಪಾರಾಗಿದ್ದಾರೆ. 

ನಾಪತ್ತೆಯಾದ ಯುವಕನ ಪತ್ತೆಗಾಗಿ ಅಗ್ನಿಶಾಮಕ ಪೊಲೀಸ್ ಸಿಬ್ಬಂದಿಗಳು ಮತ್ತು ಮೀನುಗಾರರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button