Follow Us On

WhatsApp Group
Important
Trending

Road Accident; ಮರಕ್ಕೆ ಡಿಕ್ಕಿಯಾದ ಇನ್ನೋವಾ ಕಾರು: ಓರ್ವ ಸಾವು, ಇನ್ನೋರ್ವ ಗಂಭೀರ

ಹೈದರಾಬಾದಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಪ್ರವಾಸಿಗರು

ಅಂಕೋಲಾ: ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಇನೋವಾ ಕಾರೊಂದು ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತಿಯಂಚಿನ ತಗ್ಗಿಗಿಳಿದು ಮರಕ್ಕೆ ಡಿಕ್ಕಿ ಪಡಿಸಿಕೊಂಡ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ಇನ್ನೂರ್ವ ಗಂಭೀರ ಗಾಯಗೊಂಡರೆ, ಉಳಿದ ಇತರೆ 2-3 ಪ್ರಮಾಣಿಕರು ಗಾಯಾಳುವಾದ ಘಟನೆ ( Road Accident) ತಾಲೂಕಿನ ಸರಳೇಬೈಲ್ ಬಳಿ ಸಂಭವಿಸಿದೆ.

ಹೈದ್ರಾಬಾದಿನಿಂದ ಗೆಳೆಯರು ಕೂಡಿಕೊಂಡು ( AP 29 AY 0011 ) ಇನೋವಾ ಕಾರಿನಲ್ಲಿ ಅಂಕೋಲಾ ಮಾರ್ಗವಾಗಿ ಗೋಕರ್ಣ, ಗೋವಾ ಮತ್ತಿತರೆಡೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅಂಕೋಲಾದ ಸರಳೇ ಬೈಲ್ ಹತ್ತಿರ ರಸ್ತೆಗೆ ಅಡ್ಡಲಾಗಿ ಬಂದ ನಾಯಿ ತಪ್ಪಿಸಲು ಹೋಗಿ ಅಥವಾ ಇನ್ನಿತರೇ ಕಾರಣಗಳಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಅಂಚಿನ ಮರಕ್ಕೆ ಡಿಕ್ಕಿಯಾಗಿದೆ ( Road Accident) ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂ ಗೊಂಡು, ತಲೆ ಮತ್ತಿತರ ಭಾಗಗಳಿಗೆ ಗಂಭೀರ ಗಾಯ ಗೊಂಡಿದ್ದ ರೋಹಿತ್ ಎಂಬಾತ ಅಂಕೋಲಾ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ಇನ್ನೋರ್ವನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಗೆ ಸಾಗಿಸಲಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರೆ 2-3 ಪ್ರಯಾಣಿಕರಿಗೂ ಚಿಕ್ಕ ಪುಟ್ಟಗಾಯ ನೋವುಗಳಾಗಿದೆ ಎನ್ನಲಾಗಿದ್ದು ಅವರಿಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಸುದ್ದಿ ತಿಳಿದ ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳಾದ ಎಎಸ್ಐ ಚಂದ್ರಕಾಂತ ನಾಯ್ಕ, ಸಿಬ್ಬಂದಿ ಉಮೇಶ ಗಾಳಿ , ಅಂಕೋಲಾ ಸಂಚಾರಿ ವಿಭಾಗದ ಪಿ.ಎಸ್.ಐ ಸುನೀಲ್ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಲ್ಲದೇ,ಸ್ಥಳೀಯರ ಸಹಕಾರದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಅಂಕೋಲಾದ ಒಂದಿಬ್ಬರು ಆರ್ ಎಸ್ ಎಸ್ ಮುಖಂಡರು ಸಹ ಮಾನವೀಯ ನೆಲೆಯಲ್ಲಿ ಗಾಯಾಳುಗಳ ಚಿಕಿತ್ಸೆಗೆ ನೆರವಾದರು.ಅಪಘಾತದ ಘಟನೆಗಳ ಕುರಿತಂತೆ ಮತ್ತು ಮೃತ ವ್ಯಕ್ತಿ ಹಾಗೂ ಇತರೆ ಗಾಯಾಳುಗಳ ಕುರಿತಂತೆ ಪೊಲೀಸರಿಂದ ನಿಖರ ಮತ್ತು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button