Follow Us On

Google News
Important
Trending

ಹೊನ್ನಾವರದಲ್ಲಿ ಮತ್ತೊಂದು ಕರೊನಾ ಸೋಂಕಿತರ ಸಂಖ್ಯೆ ಎಂಟಕ್ಕೇರಿಕೆ

ಹೊನ್ನಾವರ: ಉತ್ತರಕನ್ನಡದ ಹೊನ್ನಾವರ ಪಟ್ಟಣದ ನಿವಾಸಿ 45 ವರ್ಷದ ವ್ಯಕ್ತಿಗೆ ಕರೋನಾ ಪಾಸಿಟಿವ್ ಬಂದಿರುದು ದೃಡಪಟ್ಟಿದೆ. ಇವರು ಕೆಲವು ದಿನಗಳ ಹಿಂದೆ 25 ಜನರ ಜೊತೆಗೆ ಮುಂಬೈ ನಿಂದ ಭಟ್ಕಳಕ್ಕೆ ಬಂದಿಳಿದಿದ್ದರು. ಇವರಲ್ಲಿ 11 ಭಟ್ಕಳದವರೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನುಳಿದವರು ಉಡಪಿಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ಈಗ ಸೋಂಕು ದೃಢಪಟ್ಟ ವ್ಯಕ್ತಿಯನ್ನು ಭಟ್ಕಳದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು . ಬಳಿಕ ಜ್ವರ ಕಾಣಿಸಿಕೊಂಡಿರುವುದರಿಂದ ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದೀಗ ಗಂಟಲುದ್ರವದ ವರದಿ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ

Back to top button