Follow Us On

Google News
Important
Trending

ಸಂಡೆ ಲಾಕ್‍ಡೌನ್‍ಗೆ ಹೊನ್ನಾವರದಲ್ಲಿ ಉತ್ತಮ ಬೆಂಬಲ

ಹೊನ್ನಾವರ: ಲಾಕ್‍ಡೌನ್ 4.0 ಮಾರ್ಗಸೂಚಿ ಅನ್ವಯ ಭಾನುವಾರದ ಜನತಾ ಕಫ್ರ್ಯೂ ಮಾದರಿಯ ಲಾಕ್‍ಡೌನ್‍ಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಗತ್ಯ ಸೇವೆಗಳ ಹೊರತಾಗಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಬ್ಧವಾಗಿತ್ತು. ಮೂರನೇ ಹಂತದ ಲಾಕ್‍ಡೌನ್ ಕೊನೆಗೊಂಡ ನಂತರ ನಿಧಾನವಾಗಿ ಜನಜೀವನ ಸಹಜ ಸ್ಥಿತಿಯತ್ತ ಮರಳುವ ಲಕ್ಷಣಗಳು ಕಂಡುಬಂದಿತ್ತಾದರೂ ಹೊರ ರಾಜ್ಯಗಳಿಂದ ಆಗಮಿಸಿದ ಹೆಚ್ಚಿನವರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ರಜಾ ದಿನವಾದ ಕಾರಣ ಭಾನುವಾರ ನಗರಗಳಲ್ಲಿ ಜನದಟ್ಟಣೆ ಹೆಚ್ಚುವುದರಿಂದ ಕೊರೊನಾ ಸೋಂಕು ಹರಡುವುವದಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು ಎನ್ನುವ ಹಿನ್ನಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. 36 ಗಂಟೆಗಳ ಲಾಕ್‍ಡೌನ್‍ಗೆ ಉತ್ತಮವಾಗಿ ಸ್ಪಂದಿಸಿರುವ ತಾಲೂಕಿನ ಜನರು ಎಲ್ಲಿಯೂ ಲಾಕ್‍ಡೌನ್ ನಿಯಮ ಉಲ್ಲಂಘನೆಯಂತ ಉದ್ಧಟತನವನ್ನು ತೋರಿದ ವರದಿಯಾಗಿಲ್ಲ. ಪಟ್ಟಣದಲ್ಲಿ ಹಾಲು ಹಾಗೂ ಔಷಧಿ ಅಂಗಡಿಗಳನ್ನು ಹೊರತಪಡಿಸಿ ಉಳಿದವೆಲ್ಲವೂ ಬಂದ್ ಆಗಿದ್ದವು. ಈದ್ ಉಲ್ ಪಿತರ್ ಇದ್ದರೂ ಪಟ್ಟಣದ ಯಾವುದೇ ರಸ್ತೆಯಲ್ಲಿಯೂ ಸಂಚಾರ ಕಂಡುಬರಲಿಲ್ಲ. ವಾರದ ಎಲ್ಲಾ ದಿನಗಳು ಲಾಕ್‍ಡೌನ್ ಸಡಿಲಿಸಿ ಭಾನುವಾರ ಮಾತ್ರ ಲಾಕ್‍ಡೌನ್ ಬಿಗಿಗೊಳಿಸುವ ನಿಯಮದ ಬಗ್ಗೆ ಜನರಲ್ಲಿ ಗೊಂದಲವಿದ್ದರೂ ತಮ್ಮ ಹಾಗೂ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಪರಿಣಾಮ ಸರ್ಕಾರದ ಸೂಚನೆಗಳನ್ನು ದಿಕ್ಕರಿಸಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಯಾಕೆ ಎಂದು ಭಾನುವಾರದ ಲಾಕ್‍ಡೌನ್ ಪಾಲಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button