Important
Trending

ಈಜಲು ಹೋದ ಪ್ರವಾಸಿಗರಿಬ್ಬರು ನೀರು ಪಾಲು: ದಡಕ್ಕೆ ಬಂದು ಬಿದ್ದಿದೆ ಓರ್ವನ ಮೃತದೇಹ: ಇನ್ನೊರ್ವನ ಶವ ಇನ್ನೂ ಪತ್ತೆಯಾಗಿಲ್ಲ

ಪ್ರವಾಸಿಗರ ನಿರ್ಲಕ್ಷ್ಯದಿಂದ ಹೆಚ್ಚುತ್ತಿದೆ ಸಾವು

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗರಿಬ್ಬರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ರವಿವಾರ ಸಂಜೆ ಮುರುಡೇಶ್ವರ ದೇವಸ್ಥಾನದ ಬಲ ಭಾಗದ ಸಮುದ್ರ ತೀರದಲ್ಲಿ ನಡೆದಿದೆ. ಹವಾಮಾನ ವೈಪರೀತ್ಯದಿಂದ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಇರುವ ಕಾರಣ ಪ್ರವಾಸಿಗರು ಸಮುದ್ರದಲ್ಲಿ ಇಳಿಯಬಾರದೆಂದು ನಿಷೇಧ ಹೇರಲಾಗಿದೆ. ಆದರೆ ಪ್ರವಾಸಕ್ಕಾಗಿ ಬಂದ ನಾಲ್ವರ ಗುಂಪು ಮೋಜು ಮಸ್ತಿಗೆ ಇಳಿದಿದೆ.

ಹೌದು, ನಾಲ್ಕು ಯುವಕರ ತಂಡ ದೇವಸ್ಥಾನದ ಬಲಭಾಗದಲ್ಲಿರುವ ಆರ್.ಎನ್.ಎಸ್ ಕಲ್ಯಾಣ ಮಂಟಪದ ಬದಿಯ ಸಮುದ್ರದಲ್ಲಿ ಮೋಜು ಮಸ್ತಿಗೆ ಈಜಲು ತೆರಳಿದ್ದು, ಅಲೆಯ ಹೊಡೆತಕ್ಕೆ 4 ಜನ ಯುವಕರು ಕೊಚ್ಚಿಹೋಗಿದ್ದಾರೆ.

ಅದರಲ್ಲಿ ಇಬ್ಬರು ಯುವಕರು ಹಾಗೋ ಹೀಗೂ ಈಜಿಕೊಂಡು ದಡ ಸೇರಿ ಜೀವ ಉಳಿಸಿಕೊಂಡ್ದಾರೆ. ಇನ್ನಿಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವನ ಮೃತದೇಹ ಅಲೆಯ ಹೊಡೆತಕ್ಕೆ ಸಮುದ್ರದ ದಡಕ್ಕೆ ಬಂದು ಬದ್ದಿದೆ. ಇನ್ನೋರ್ವ ಮೃತ ಯುವಕನನ್ನು ಶಿವಮೊಗ್ಗದ ಮಾಸೂರು ರೋಡ್ ಶಿಕಾರಿಪುರ ನಿವಾಸಿಗಳು ಎಂದು ತಿಳಿದು ಬಂದಿದೆ.

ಇವರು ತನ್ನ 4 ಜನ ಸ್ನೇಹಿತರೊಂದಿಗೆ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದು ದೇವರ ದರ್ಶನ ಪಡೆದ್ದಾರೆ. ನಂತರ ಸಮುದ್ರಕ್ಕಿಯಲು ಹೋದ ವೇಳೆ ಈ ದುರ್ಘಟನೆ ನಡೆದಿದೆ. ಇನ್ನೊಬ್ಬ ಯುವಕನ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ನಿನ್ನೆಯೂ ಪ್ರವಾಸಕ್ಕೆಂದು ಬಂದಿದ್ದ, ಇಬ್ಬರು ಯುವಕರು, ನೀರಿನಲ್ಲಿ ಕೋಚ್ಚಿ ಹೋಗಿದ್ದು, ಸ್ಥಳೀಯ ಮೀನುಗಾರರು ಜೀವದ ಹಂಗು ತೋರೆದು ರಕ್ಷಣೆ ಮಾಡಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button