Focus News
Trending

ಸ್ವಂತ ಖರ್ಚಿನಲ್ಲಿ ತಾರಿಬಾಗಿಲ ದೋಣಿ ಕಟ್ಟು ರಿಪೇರಿ: ಸಮಸ್ಯೆಗೆ ಸ್ಪಂದಿಸಿದ ಹಳದೀಪುರ ಗ್ರಾ.ಪಂ ಅಧ್ಯಕ್ಷರು

ಇತರರಿಗೆ ಮಾದರಿಯಾದ ಜನಪ್ರತಿನಿಧಿ

ಹೊನ್ನಾವರ: ತಾಲೂಕಿನ ಹಳದೀಪುರ ಗ್ರಾ.ಪಂ. ವ್ಯಾಪ್ತಿಯಲ್ಲಿನ ತಾರೀಬಾಗಿಲ ಮಜರೆಯಲ್ಲಿ ಹಾದು ಹೋಗುವ ಬಡಗಣಿ ನದಿ ದಾಟಿ ಕರ್ಕಿ ಗ್ರಾಮ ಹಾಗೂ ಹೊನ್ನಾವರ ಪಟ್ಟಣಕ್ಕೆ ಹೋಗುವುದಾದರೆ ಸ್ಥಳೀಯ ಗ್ರಾಮಸ್ಥರು ದೋಣಿಯನ್ನೇ ಆಶ್ರಯಿಸಬೇಕಾಗಿದೆ. ಆದರೆ ಇಲ್ಲಿ ದೋಣಿ ತಾಡುವ ಕಟ್ಟು ಕರ್ಕಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುತ್ತಿದ್ದು, ಅದು ಸಂಪೂರ್ಣ ನಾಶವಾಗಿದ್ದು, ಅದನ್ನು ತಾವು ವೈಯಕ್ತಿಕವಾಗಿ ಖರ್ಚು ಮಾಡಿ ಸಮಸ್ಯೆ ಬಗೆ ಹರಿಸಿಕೊಡುವುದಾಗಿ ಹಳದೀಪುರ ಗ್ರಾ.ಪಂ.ಅಧ್ಯಕ್ಷ ಅಜಿತ ಮುಕುಂದ ನಾಯ್ಕ ಅವರು ಭರವಸೆ ನೀಡಿದ್ದಾರೆ.

ಜೀರ್ಣಾವಸ್ಥೆಯಲ್ಲಿದ್ದ ಈ ಕಟ್ಟು ಕರ್ಕಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುತ್ತಿದೆಯಾದರೂ ಇದನ್ನು ಬಳಸಿ ದೋಣಿಯ ಮೂಲಕ ಓಡಾಡುವ ಜನರು ಹಳದೀಪುರ ಗ್ರಾ.ಪಂ. ವ್ಯಾಪ್ತಿಯ ತಾರಿಬಾಗಿಲಿನ ಜನರಾಗಿದ್ದಾರೆ. ಹೀಗಾಗಿ ಕಟ್ಟಿನ ರಿಫೇರಿಗಾಗಿ ಹಳದೀಪುರ ಪಂಚಾಯತದಿಂದ ಹಣ ವ್ಯಯಿಸಲು ತಾಂತ್ರಿಕ ತೊಂದರೆಯಾಗುತ್ತಿರುವುದರಿಂದ ತಾವು ವೈಯಕ್ತಿಕವಾಗಿ ಹಣ ಹಾಕಿ ಕಟ್ಟು ರಿಫೇರಿ ಮಾಡಿಕೊಡುವುದಾಗಿ ಅಜಿತ್ ನಾಯ್ಕ ಹೇಳಿದರು.

ತಾರಿಬಾಗಿಲ ವಾರ್ಡ್‍ನ ಸದಸ್ಯರಾದ ಗುಣಮಾಲಾ ಜೈನ್, ಮಂಗಲಾ ಮುಕ್ರಿ, ಮಂಜುನಾಥ ನಾಯ್ಕ ಅವರು ಈ ಸಮಸ್ಯೆಯನ್ನು ಅಧ್ಯಕ್ಷ ಅಜಿತ ಮುಕುಂದ ನಾಯ್ಕ ಗಮನಕ್ಕೆ ತಂದಾಗ ಅವರು ತಕ್ಷಣ ದೋಣಿಯಲ್ಲಿ ತಾರಿಬಾಗಿಲಿಗೆ ತೆರಳಿ ಸಮಸ್ಯೆ ಪರಿಶೀಲಿಸಿ, ಜನರ ಬವಣೆಗೆ ಪರಿಹಾರ ಕಂಡುಕೊಳ್ಳಲು ಸ್ವತಃ ತಾವೇ ವೆಚ್ಚ ಬರಿಸಿ ದೊಣಿ ತಾಡುವ ಕಟ್ಟು ಸರಿಪಡಿಸಿ ಕೊಡುವುದಾಗಿ ತಿಳಿಸಿದರು..

ಈ ಸಂದರ್ಭದಲ್ಲಿ ತಾರಿಬಾಗಿಲಿನ ಭುವನೇಶ್ವರ ಹರಿಕಾಂತ, ನರಸಿಂಹ ಹರಿಕಾಂತ, ಮಾರುತಿ ನಾಯ್ಕ, ಮಂಜುನಾಥ ನಾಯ್ಕ, ಪ್ರಸನ್ನ ನಾಯ್ಕ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷರು ಜನರ ಬವಣೆಗೆ ಸ್ಪಂದಿಸಿದ ರೀತಿಯನ್ನು ಸ್ಥಳೀಯ ಯುವಕ ಮಂಡಳಿ ಸದಸ್ಯರು ಹಾಗೂ ಊರ ನಾಗರಿಕರು ಪ್ರಶಂಸಿಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button