ಕುಮಟಾ : ಕರೋನಾದ ರುದ್ರತಾಂಡವ ಇಡೀ ದೇಶವನ್ನೇ ಬೆಚ್ಚಿಬೀಳಿಸಿ ಲಾಕ್ ಡೌನ್ ನಿಂದ ಹೊರಬರಲು ಹಲವಾರು ತಿಂಗಳುಗಳು ಬೇಕಾಯಿತು. ಈ ಅವಧಿಯಲ್ಲಿ ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವದೂ ಕಷ್ಟವೆನ್ನುವ ದುಸ್ಥಿತಿ ಬಂದೊದಗಿತ್ತು. ಅನ್ ಲಾಕ್ ಬಳಿಕ ಕೆಲವೊಮ್ಮೆ ಬ್ಯಾಂಕಿಗೆ ಹೋದರೂ ಉಳಿತಾಯ ಖಾತೆಗೆ ಸಂಬಂಧಿಸಿದ ಪಾಸ್ ಪುಸ್ತಕದ ಪುಟಗಳಲ್ಲಿ ಬ್ಯಾಂಕ್ ಸಿಬ್ಬಂದಿ ಮುದ್ರಣವನ್ನೂ ಮಾಡಿಕೊಡುತ್ತಿರಲಿಲ್ಲ. ಕೇವಲ ಹಣವನ್ನು ತುಂಬುವುದು ಅಥವಾ ತೆಗೆಯುವುದಕ್ಕಷ್ಟೇ ಅವಕಾಶ ಮಾಡಿಕೊಡಲಾಗಿತ್ತು. ಕಾರಣ ಸಾಂಕ್ರಾಮಿಕ ರೋಗದಿಂದ ದೂರವಿರಬೇಕೆನ್ನುವ ಸದಾಶಯವಿರುವುದು ಸ್ಪಷ್ಟವಾಗಿತ್ತು.
ಆದರೆ ಈಗ ಖಾತೆದಾರರು ಬಾಂಕಿಗೆ ಹೋಗಿ ಪಾಸ್ ಪುಸ್ತಕದ ಮುದ್ರಣವನ್ನು ಪಡೆದರೆ ಶಾಕ್ ಆಗುವಂಥ ಸರದಿ ಗ್ರಾಹಕರದ್ದು. ಏಕೆಂದರೆ ನಮಗೆ ಗೊತ್ತಿಲ್ಲದ ಕೆಲವು ಸೇವೆಗಳನ್ನು ಬ್ಯಾಂಕಿನವರು ನಮಗೆ ಒದಗಿಸಿದ್ದಾರೆ. ಆ ಸೇವೆಗಳಿಗಾಗಿ ಕೆಲವೊಂದು ಶುಲ್ಕವನ್ನು ವಿಧಿಸಿ ಗ್ರಾಹಕರಿಗೆ ಅನವಶ್ಯಕ ಹೊರೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕೋಡಕಣಿಯಲ್ಲಿ ವಾಸ್ತವ್ಯವಿರುವ ಅರವಿಂದ ಶ್ಯಾನಭಾಗ, ಬಾಳೇರಿಯವರು 15-07-2021 ರಂದು ಬ್ಯಾಂಕಿಗೆ ತೆರಳಿ ಪಾಸ್ ಪುಸ್ತಕದ ಮುದ್ರಣವನ್ನು ಪಡೆದುಕೊಂಡಾಗ ಅವರ ಖಾತೆಯಿಂದ 30-03-2021 ಮತ್ತು 29-06-2021 ರಂದು ತಲಾ 18 ರೂಪಾಯಿಯಂತೆ ಎರಡು ಸಲ ಎಸ್.ಎಂ.ಎಸ್. ಚಾರ್ಜಸ್ ನ್ಯೂ ಎನ್ನುವ ಶೀರ್ಷಿಕೆಯಲ್ಲಿ 36 ರೂಪಾಯಿ ಕಡಿತಗೊಳಿಸಲಾಗಿದೆ. ಇನ್ನೊಂದು ಖಾತೆಯಿಂದ 27-05-2021 ರಂದು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನಾ(ಪಿಎಂಎಸ್‍ಬಿವಾಯ್) ರಿನೀವಲ್(21-22) ಶೀರ್ಷಿಕೆಯಡಿ 12 ರೂಪಾಯಿ ಕಡಿತಗೊಳಿಸಲಾಗಿದೆ. ಈ ಕುರಿತು ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದರೆ ಅಟೊಮೆಟಿಕ್ ಆಗಿರುತ್ತದೆ. ಅದನ್ನು ನಿಲ್ಲಿಸಬಹುದು. ಆದರೆ ಕಡಿತಗೊಳಿಸಿದ ಹಣವನ್ನು ವಾಪಸ್ ಮಾಡಲಾಗದು ಎಂದಿದ್ದಾರೆ.
ಕೆನರಾ ಬ್ಯಾಂಕ್ ಕೋಡಕಣಿ ಶಾಖೆಯ ಪ್ರಬಂಧಕರಲ್ಲಿ ಈ ವಿಚಾರವಾಗಿ ಕೇಳಿದಾಗ ನೀವು ಕೋರಿಕೆ ಕೊಟ್ಟಿರುವುದರಿಂದ ಕಡಿತಗೊಂಡಿದೆ ಎನ್ನುವ ಹಾರಿಕೆ ಉತ್ತರ ನೀಡಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ. “ಎಸ್.ಎಂ.ಎಸ್. ಸೇವೆ ಬೇಕು ಎನ್ನುವ ಕೋರಿಕೆಯನ್ನು ಸಲ್ಲಿಸದಿರುವಾಗ ಏಕಾಏಕೀ ಖಾತೆದಾರರ ಖಾತೆಯಿಂದ ಹಣವನ್ನು ಆಕರಿಸಿರುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಅರವಿಂದ ಶ್ಯಾನಭಾಗರು ಪ್ರಶ್ನಿಸಿದಾಗ ಶಾಖಾ ಪ್ರಬಂಧಕರು ಲಿಖಿತವಾಗಿ ಮನವಿ ಕೊಟ್ಟರೆ ಸರಿಪಡಿಸಲಾಗುವುದು ಎಂದಿದ್ದಾರೆ. ಈಗ ಈ ಕುರಿತು ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ.
ಇದು ಕೇವಲ ಅರವಿಂದ ಶ್ಯಾನಭಾಗರಿಗಾದ ಸಮಸ್ಯೆಯಲ್ಲ. ನಾಲ್ಕಾರು ಜನರ ಖಾತೆಯನ್ನು ಪರಿಶೀಲಿಸಲಾಗಿ ದೂರವಾಣಿ ಇಲ್ಲದ ಗ್ರಾಹಕರಿಗೂ ಎಸ್.ಎಂ.ಎಸ್. ಚಾರ್ಜಸ್ ನ್ಯೂ ಎನ್ನುವ ಶೀರ್ಷಿಕೆಯಲ್ಲಿ 18 ರೂಪಾಯಿಯಂತೆ ಎರಡು ಸಲ ಕಡಿತಗೊಳಿಸಲಾಗಿದೆ. ಒಂದು ವರ್ಷದಿಂದ ಬ್ಯಾಂಕಿಗೆ ಹೋಗಿರದ ಹಿರಿಯ ನಾಗರೀಕರ ಖಾತೆಗೂ ಎಸ್.ಎಂ.ಎಸ್. ಚಾರ್ಜಸ್ ನ್ಯೂ ಎನ್ನುವ ಶೀರ್ಷಿಕೆಯಲ್ಲಿ 36 ರೂಪಾಯಿ ಗುನ್ನಾ ಬಿದ್ದಿದೆ.
ಸಿಂಡಿಕೇಟ್‍ನಿಂದ ಕೆನರಾ ಆಗಿ ಬ್ಯಾಂಕ್ ವಿಲೀನವಾದ ಬಳಿಕ ಇಂಥಹ ಧೋಕಾಗಳನ್ನು ಗ್ರಾಹಕರು ನಿತ್ಯ ಅನುಭವಿಸುವಂತಾಗಿದೆ. ಕನಿಷ್ಟ 5000 ಖಾತೆಗಳಿರುವ ಒಂದು ಶಾಖೆಯಿಂದ ತ್ರೈಮಾಸಿಕವಾಗಿ 18 ರೂಪಾಯಿಯನ್ನು ಕಡಿತಗೊಳಿಸಿದರೆ 90000 ರೂಪಾಯಿ ಮತ್ತು ಅದಕ್ಕೆ 4% ಬಡ್ಡಿಯನ್ನು ಸೇರಿಸಿದರೆ ಲಕ್ಷಾಂತರ ರೂಪಾಯಿ ಹಗರಣವನ್ನು ಬ್ಯಾಂಕುಗಳು ನಡೆಸುತ್ತಿವೆ.
ಈ ಹಿಂದೆ ಕೆವೈಸಿ ಹೆಸರಲ್ಲಿ ಖಾತೆದಾರರ ವಿಳಾಸ ಪರಿಶಿಲನೆಯನ್ನು ನಡೆಸುವಾಗ ಪ್ರತಿಯೊಬ್ಬ ಖಾತೆದಾರರ ದೂರವಾಣಿ ಸಂಖ್ಯೆ ಮತ್ತು ಈಮೇಲ್ ವಿಳಾಸವನ್ನು ಪಡೆಯಲಾಗಿತ್ತು. ದೂರವಾಣಿ ಇಲ್ಲದವರಿಗೂ ಕೂಡ ಯಾರದಾದರೂ ಸಂಖ್ಯೆಯನ್ನು ನೀಡುವಂತೆ ಬಲವಂತಪಡಿಸಲಾಗಿತ್ತು. ಇವುಗಳ ಹಿಂದಿನ ಉದ್ದೇಶ ದಿನಕಳೆದಂತೆ ಸ್ಪಷ್ಟವಾಗುತ್ತಿದೆ. ಸ್ವಯಂಚಾಲಿತವಾಗಿ ಅಂತರ್ಜಾಲ ವ್ಯವಸ್ಥೆಯ ಮೂಲಕ ದೂರವಾಣಿ ಸಂಖ್ಯೆಗಳಿಗೆ ಕಾಟಾಚಾರಕ್ಕೆ ವರ್ಷಕ್ಕೊಂದು ಸಂದೇಶ ಕಳಿಸಿ 12 ರಿಂದ 18 ರೂಪಾಯಿಯ ಕಡಿಮೆ ಮೊತ್ತದ ಹಣವನ್ನು ಕಡಿತಗೊಳಿಸುವುದರ ಹಿಂದೆ ದೊಡ್ಡದೊಂದು ಹುನ್ನಾರವೇ ಇದೆ.
ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಗೆ ಒಮ್ಮೆ ನೋಂದಾಯಿಸಿದರೆ ಬ್ಯಾಂಕಿನವರು ಹಿಂದೆ ಮುಂದೆ ನೋಡದೇ ಖಾತೆದಾರರ ಅನುಮತಿಯನ್ನೂ ಪಡೆಯದೇ ರಿನೀವಲ್ ನೆಪದಲ್ಲಿ ಹಣವನ್ನು ಕಡಿತಗೊಳಿಸುವದನ್ನು ನೋಡಿದರೆ ಇಂಥ ಅಚಾತುರ್ಯದ ಹಿಂದೆ ಕೇಂದ್ರ ಸರ್ಕಾರದ ಬೆಂಬಲವಿರುವುದನ್ನು ಅಲ್ಲಗಳೆಯುವಂತಿಲ್ಲ. ಖಾತೆದಾರರು ಜಾಗೃತರಾಗದಿದ್ದರೆ ಇಂಥ ಹಲವಾರು ಪ್ರಸಂಗಗಳು ಘಟಿಸುವುದರಲ್ಲಿ ಅನುಮಾನವೇ ಇಲ್ಲ.
ವಿಸ್ಮಯ ನ್ಯೂಸ್ ಕುಮಟಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.