Big News
Trending

ಹಾಂಕಾಂಗ್ ನಲ್ಲಿ ನಡೆದ ಏಷಿಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ: ತವರಿಗೆ ಮರಳಿದ ಸಾಧಕನಿಗೆ ಅದ್ಧೂರಿ ಸನ್ಮಾನ

ಕುಮಟಾ: ಹಾಂಕಾಂಗ್ ನಲ್ಲಿ ನಡೆದ ಏಷಿಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದು ನಮ್ಮ ರಾಷ್ಟçದ ಹಿರಿಮೆಯನ್ನು ಹೆಚ್ಚಿಸುವುದರ ಜೊತೆಗೆ ಮಹತ್ತರ ಸಾಧನೆಯನ್ನು ಗೈದಿರುವ ಕುಮಟಾದ ರಾಜೇಶ್ ಮಡಿವಾಳ ಅವರನ್ನು ಇಂದು ಕುಮಟಾ ಪ್ರಭು ಫಿಟ್ನೆಸ್ ಸೆಂಟರ್ ಹಾಗೂ ಕುಮಟಾ ಮುನ್ಸಿಪಲ್ ವ್ಯಾಯಾಮ ಶಾಲೆಯ ವತಿಯಿಂದ ಸ್ವಾಗತಿಸಲಾಯಿತು.

ಕುಮಟಾದ ಗಿಬ್ ಸರ್ಕಲ್‌ನಲ್ಲಿ ನೆರೆದ ಸರ್ವರೂ ರಾಜೇಶ್ ಮಡಿವಾಳ ಅವರನ್ನು ಸ್ವಾಗತಿಸಿ ಗೌರವಿಸಿದರು. ಈ ವೇಳೆ ಹಾಜರಿದ್ದ ಜೆ.ಡಿ.ಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಅವರು ಮಾತನಾಡಿ, ನಮ್ಮ ಕುಮಟಾದ ರಾಜೇಶ್ ಮಡಿವಾಳ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಈ ವೇಳೆ ಕುಮಟಾ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯ್ಕ ಅವರು ಹಾಗೂ ಕುಮಟಾ ಪ್ರಭು ಫಿಟ್ನೆಸ್ ಸೆಂಟರ್ ನ ಮಾಲೀಕರಾದ ವೆಂಕಟೇಶ ಪ್ರಭು ಅವರು ಮಾತನಾಡಿ, ಏಷಿಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದು ಅಭೂತಪೂರ್ವಯಶಸ್ಸು ಗಳಿಸಿದ ರಾಜೇಶ ಮಡಿವಾಳ ಅವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ ಮಡಿವಾಳ ಅವರು, ಕಠಿಣ ಪರಿಶ್ರಮದಿಂದ ಯಾವುದು ಅಸಾಧ್ಯ ಎಂಬುದಿಲ್ಲ ಎನ್ನುತ್ತಾ ಸ್ವಾತಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಪ್ರಭು ಫಿಟ್ನೆಸ್ ಸೆಂಟರ್ ಹಾಗೂ ಕುಮಟಾ ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button