Follow Us On

Google News
Important
Trending

ಭಟ್ಕಳದಲ್ಲಿ ಪಾಕ್ ಮಹಿಳೆ ಬಂಧನ ಪ್ರಕರಣ: ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು

ಬೆಂಗಳೂರು: ಭಟ್ಕಳದಲ್ಲಿ ವಾಸವಿದ್ದ ಪಾಕ್ ಮಹಿಳೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಮಹಿಳೆ ಖತೀಜಾ ಮೆಹರೀನ್‌ಗೆ ಧಾರವಾಡ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ಮೌಲ್ಯದ ಬಾಂಡ್ ಸಲ್ಲಿಸಬೇಕು, ಸಾಕ್ಷಿ ನಾಶಕ್ಕೆ ಯತ್ನಿಸಬಾರದು. ಪೂರ್ವಾನುಮತಿ ಇಲ್ಲದೇ ಬೇರೆ ಸ್ಥಳಕ್ಕೆ ಹೋಗಬಾರದು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ.

ಬೈಕ್ ಅಪಘಾತದಿಂದ ಹೆದರಿ ಬಾಲಕ: ಹೃದಯಾಘಾತವಾಗಿ ಸಾವು

ಖತೀಜಾ ಮೆಹರೀನ್ ಎಂಬ ಈ ಪಾಕ್ ಮಹಿಳೆ ಪಾಸ್‌ಪೋರ್ಟ್ ಹಾಗೂ ಇತರೆ ಯಾವುದೇ ದಾಖಲೆ ಇಲ್ಲದೇ ಭಾರತಕ್ಕೆ ಮಹಿಳೆ ನುಸುಳಿದ್ದಳು. ಈ ಹಿನ್ನೆಲೆ 2021ರಲ್ಲಿ ಗುಪ್ತಚರ ಇಲಾಖೆ, ಪೊಲೀಸರು ಖತೀಜಾಳನ್ನು ವಶಕ್ಕೆ ಪಡೆದಿದ್ದರು. ಈಕೆ ಭಟ್ಕಳದ ಜಾವೇದ್ ರುಕ್ನುದ್ದೀನ್​ ಜೊತೆ ಮದುವೆಯಾಗಿದ್ದು, ಮೂವರು ಮಕ್ಕಳಿಸಿದ್ದಾರೆ. ಇತ್ತೀಚೆಗೆ ಇವರ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ವಿಸ್ಮಯ ನ್ಯೂಸ್ ಕಾರವಾರ

Back to top button