Follow Us On

WhatsApp Group
Important
Trending

ಬೈಕ್ ಅಪಘಾತದಿಂದ ಹೆದರಿ ಬಾಲಕ: ಹೃದಯಾಘಾತವಾಗಿ ಸಾವು

ಹೆದರಿ ಅಲ್ಲಿಯೇ ಕುಸಿದುಬಿದ್ದ ಬಾಲಕ

ಭಟ್ಕಳ: ಬಾಲಕನೋರ್ವ ಬೈಕ್ ಅಪಘಾತದಿಂದಾಗಿ ಹೆದರಿದ ಪರಿಣಾಮ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈತನ ಬೈಕ್ ಬೇರೊಬ್ಬರ ಬೈಕ್ ಗೆ ತಾಗಿದ್ದು, ಈತ ಚಲಾಯಿಸುತ್ತಿದ್ದ ಬೈಕ್ ಕೆಳಗೆ ಬಿದ್ದಿದ್ದು, ಬೈಕನ್ನು ಎತ್ತಿ ನಿಲ್ಲಿಸುವ ವೇಳೆ ಜನರು ಸೇರಿಕೊಂಡಿದ್ದಾರೆ.

ಆಟವಾಡಲು ತೆರಳಿದ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು: ಮುಗಿಲು ಮುಟ್ಟಿದ ಆಕ್ರಂದನ

ಇದರಿoದ ಹೆದರಿಕೊಂಡ ಬಾಲಕ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಆಗಲೇ ಮೃತಪಟ್ಟಿದ್ದ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಅಬ್ದುಲ್ಲಾ ಆಫ್ರಿಕಾ (14) ಮೃತಪಟ್ಟ ವಿದ್ಯಾರ್ಥಿ. ಮೃತ ವಿದ್ಯಾರ್ಥಿಯ ತಂದೆ ಸೌದಿ ಅರೆಬಿಯಾದಲ್ಲಿ ಉದ್ಯೋಗಿಯಾಗಿ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button