ಆಟವಾಡಲು ತೆರಳಿದ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು: ಮುಗಿಲು ಮುಟ್ಟಿದ ಆಕ್ರಂದನ

ಶಾಲೆ ಮುಗಿಸಿ ಬಂದ ನಂತರ ನಾಲ್ವರು ಬಾಲಕರು ಕೆರೆ ಬಳಿ ಆಟವಾಡಲು ತೆರಳಿದ್ದರು

ಶಿರಸಿ: ಆಟವಾಡಲು ತೆರಳಿದ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿರುವ ಎಸಳೆ ಕೆರೆಯಲ್ಲಿ ನಡೆದಿದೆ. ಕಸ್ತೂರಬಾ ನಗರದ ಅಹ್ಮದ್ ರಜಾಕ್ ಜನ್ನಿಗೇರಿ (14), ಇಮಾಮ್ ಖಾಸಿಮ್ ರಿಯಾಜ್ ಪಾಳಾ (14) ಮೃತ ಬಾಲಕರು ಎಂದು ತಿಳಿದುಬಂದಿದೆ. ಈ ಬಾಲಕರು ಕಸ್ತೂರಬಾ ಶಾಲೆಯಲ್ಲಿ ಓದುತ್ತಿದ್ದರು. ಶಾಲೆ ಮುಗಿಸಿ ಬಂದ ನಂತರ ನಾಲ್ವರು ಬಾಲಕರು ಕೆರೆ ಬಳಿ ಆಟವಾಡಲು ತೆರಳಿದ್ದರು.

ಆಸ್ತಿ ವಿವಾದ: ಅಣ್ಣನನ್ನೇ ಕೊಲೆ ಮಾಡಿದ ತಮ್ಮಂದಿರು: ಆಗಿದ್ದೇನು ನೋಡಿ?

ಈ ವೇಳೆ ಇಬ್ಬರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ತೆರಳಿ ಬಾಲಕರ ಶವಗಳನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

hitendra naik

Exit mobile version