ಆಸ್ತಿ ವಿವಾದ: ಅಣ್ಣನನ್ನೇ ಕೊಲೆ ಮಾಡಿದ ತಮ್ಮಂದಿರು: ಆಗಿದ್ದೇನು ನೋಡಿ?

ಮಾತಿಗೆ ಮಾತುಬೆಳೆದು ಗಲಾಟೆ-ಹೊಡೆದಾಟ

ಹೊನ್ನಾವರ: ಸಹೋದರರ ನಡುವೆ ಆಸ್ತಿ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ಹೊನ್ನಾವರ ತಾಲೂಕಿನ ನಿಲ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ನಡೆದಿದೆ.ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ ನಡೆಯುತ್ತಿದ್ದ ಜಗಳ ಸಾಯಂಕಾಲ ವಿಕೋಪಕ್ಕೆ ತೆರಳಿದೆ

ಮೊಬೈಲ್‌ನಲ್ಲೇ ಪ್ರೇಮಾಂಕುರ: ಉತ್ತರಪ್ರದೇಶದಿಂದ ಬಂದು ರಸ್ತೆಯಲ್ಲಿ ಅಲೆದಾಡಿದ ಯುವಕರು: ಅನುಮಾನಾಸ್ಪದವಾಗಿ ವರ್ತಿಸಿದ ಯುವಕರಿಗೆ ಸಾರ್ವಜನಿಕರು ಮಾಡಿದ್ದೇನು?

ಮೊದಲಿಗೆ ಮಾತಿಗೆ ಮಾತು ಬೆಳೆದು ಕೈ ಕೈ‌ಮಿಲಾಯಿಸಿಕೊಂಡು ವಿನಾಯಕ ಮತ್ತು ಚಿದು ಎನ್ನುವವರು ಅಣ್ಣನಾದ ಹನುಂಮತ ಎನ್ನುವವ ಮೇಲೆ ಹಲ್ಲೆ ನಡೆಸಿದ್ದಾರೆ.ತಲೆ ಭಾಗಕ್ಕೆ ಗಂಭೀರವಾಗಿ ಗಾಯವಾದ ಪರಿಣಾಮ ಹನುಮಂತ ಹೊನ್ನಪ್ಪ ನಾಯ್ಕ್(54) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮೃತರ ಸೋದರ ಮಾವ ಮಾರುತಿ ನಾಯ್ಕ್ (70)ಗೆ ಗಂಭೀರ ಗಾಯಗೊಂಡಿದ್ದಾರೆ.

ಹಲ್ಲೆ ಮಾಡಿ ಕೊಲೆಗೆ ಕಾರಣರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ್ ಪತ್ತೆಗೆ ಹೊನ್ನಾವರ ಪೊಲೀಸರು ಮುಂದಾಗಿದ್ದಾರೆ.ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version