
ಭಟ್ಕಳ : ತಾಲೂಕಿನ ಸಾಗರ ರಸ್ತೆಯಲ್ಲಿ ಭಟ್ಕಳ ಪೋಲಿಸರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ರಕ್ಷಿಸಿ ವಾಹವನ್ನು ವಶಪಡಿಸಿಕೊಂಡಿದ್ದಾರೆ. ರಾತ್ರಿ 7: 45 ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಿದ ಭಟ್ಕಳದ ಗ್ರಾಮೀಣ ಠಾಣೆಯ ಆರಕ್ಷರು. ಸಾಗರ ರಸ್ತೆ ಮಾರ್ಗವಾಗಿ ಭಟ್ಕಳಕ್ಕೆ ಬರುತ್ತಿದ್ದ ಮಹಿಂದ್ರಾ ಮ್ಯಾಕ್ಸಿ ಕ್ಯಾಬ್ ವಾಹನವನ್ನು ಗುಳ್ಮಿ ಕ್ರಾಸ್ ನಲ್ಲಿ ತಡೆದಿದ್ದಾರೆ. ವಾಹನದಲ್ಲಿ ಮೂರು ಕೋಣಗಳನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯ ಸಂಬಂಧ ಚಾಲಕ ಸೇರಿದಂತೆ ಇಬ್ಬರು ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ.
ಕೋಣೂರು ಪುರವರ್ಗ ನಿವಾಸಿ ಮಾಸ್ತಪ್ಪ ಜಟ್ಟಪ್ಪ ನಾಯ್ಕ, ಸಾಗರ ತಾಲೂಕು ಬಾನಕುಳಿಯ ರಾಜೇಂದ್ರ ಚಂದಯ್ಯ, ವಿಷ್ಣು ಮಂಜ ನಾಯ್ಕ ಪ್ರಕರಣದ ಆರೋಪಿಯಾಗಿದ್ದಾರೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯ ಬಳಿ ಹಿಂದೂ ಕಾರ್ಯಕರ್ತರು ಜಮಾವಣೆಗೊಂಡು ಪೋಲಿಸರು ಚೆಕ್ ಪೋಸ್ಟ್ ಗಳನ್ನು ಭದ್ರಪಡಿಸುಂತೆ ಆಗ್ರಹಿಸಿದ್ದು, ಕೆಲಕಾಲ ಪೋಲಿಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೊರಿತ್ತು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ