Follow Us On

WhatsApp Group
Focus NewsImportant
Trending

ಬೈಕ್ ಮೇಲೆ ಕುಳಿತಿದ್ದವನ ಮೇಲೆ ಹರಿದ ಟ್ರಕ್: ಗಾಯಗೊಂಡು ಒದ್ದಾಡುತ್ತಿದ್ದವನಿಗೆ ನೆರವಾದ ವೈದ್ಯ

ತಪ್ಪಿಸಿಕೊಂಡು ಹೋಗುತ್ತಿದ್ದ ಟ್ರಕ್ ಚಾಲಕನನ್ನು ಹಿಡಿದ ಸಾರ್ವಜನಿಕರು

ಕಾರವಾರ: ಹಿಂಬದಿಯಿoದ ಬಂದ ಟ್ರಕ್ ಒಂದು ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಬೈಕ್ ನ ಮೇಲೆ ಕುಳಿತಿದ್ದವನ ಕಾಲಿನ ಮೇಲೆ ಹರಿದ ಘಟನೆ ಇಲ್ಲಿನ ನಗರದ ಮಯೂರ ವರ್ಮ ವೇದಿಕೆಯ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಟ್ರಕ್ ಚಾಲಕ ಅಪಘಾತಪಡಿಸಿ ಟ್ರಕ್ಕನ್ನು ನಿಲ್ಲಿಸದೇ ಗೋವಾ ಕಡೆಗೆ ತೆರಳಿದ್ದು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದುರ್ಘಟನೆಯಲ್ಲಿ ತಾಲೂಕಿನ ಸದಾಶಿವಗಡ ಮೂಲದ ಗಜಾನನ ಪೈ ಎಂಬುವವರಿಗೆ ಬಲವಾದ ಪೆಟ್ಟುಬಿದ್ದಿದೆ.

ಭಟ್ಕಳದಲ್ಲಿ ಪಾಕ್ ಮಹಿಳೆ ಬಂಧನ ಪ್ರಕರಣ: ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು

ವ್ಯಕ್ತಿಯೊಬ್ಬ ತನ್ನ ತಂದೆ ಗಜಾನನ ಪೈ ಅವರನ್ನು ಬೈಕ್ ನಲ್ಲಿ ಕೂರಿಸಿಕೊಂಡು ಸದಾಶಿವಗಡದ ಕಡೆಗೆ ತೆರಲುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತವಾಗಿ ಅರ್ಧ ಗಂಟೆಗೂ ಅಧಿಕ ಕಾಲಾದರೂ 108 ಅಂಬ್ಯುಲೆನ್ಸ್ ಬರದೇ ಗಾಯಳು ನರಳಾಡಿದ್ದಾರೆ. ಈ ವೇ:ಎ ಮಂಗಳೂರಿನಿoದ ಮರಳುತ್ತಿದ್ದ ಗೋವಾದ ಮಣಿಪಾಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರೊಬ್ಬರು ತಾನೇ ಮುಂದಾಗಿ ನಿಂತು ರಸ್ತೆಯಲ್ಲೇ ಅಪಘಾತಕೀಡಾದ ವ್ಯಕ್ತಿಗೆ ಚಿಕಿತ್ಸೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

hitendra naik

Back to top button