Big News
Trending

ಯಶಸ್ವಿಯಾಗಿ ಜರುಗಿದ ಆನ್ ಲೈನ್ ರಾಷ್ಟ್ರೀಯ ವಿಚಾರ ಸಂಕಿರಣ

ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
400 ಕ್ಕೂ ಅಧಿಕ‌ ಆಸಕ್ತರು ಭಾಗಿ

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಟಿತ ಡಾ|| ಏ.ವಿ.ಬಾಳಿಗಾ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗವು ಅಗಸ್ಟ್ 1ಮತ್ತು 2ರಂದು ಎರಡು ದಿನಗಳ ಆನ್ ಲೈನ್ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ನ್ಯಾನೋ ವಸ್ತುಗಳು ಮತ್ತು ಭೌತಶಾಸ್ತ್ರ, ವಸ್ತುವಿಜ್ನಾನ ಸಂಶೋಧನೆಗಳಲ್ಲಿ ಗುಣಧರ್ಮ ಕಂಡು ಹಿಡಿಯುವ ತಂತ್ರಗಳು* ಈ ವಿಷಯದ ಮೇಲೆ ಹಮ್ಮಿಕೊಂಡ  ವಿಚಾರ ಸಂಕಿರಣಕ್ಕೆ  400ಕ್ಕೂ ಹೆಚ್ಚು ಆಸಕ್ತರು ಭಾಗವಹಿಸಿದ್ದರು.


ಕಾಲೇಜಿನ ಪ್ರಭಾರೆ ಪ್ರಾಂಶುಪಾಲರಾದ ಪ್ರೊ. ಎಮ್. ಜಿ. ಹೆಗಡೆ  ಕಾರ್ಯಕ್ರಮ ವನ್ನು ಉದ್ಘಾಟಿಸಿದರು.ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ  ಡಾ|| ಎನ್ .ಡಿ. ನಾಯಕ ಸ್ವಾಗತಿಸಿದರು.ಪ್ರೊ|| ವಿನಾಯಕ ಭಟ್ ಅತಿಥಿಗಳನ್ನು  ಪರಿಚಯಿಸಿದರು. ಪ್ರಥಮ ದಿನದ ಕಾರ್ಯಕ್ರಮದಲ್ಲಿ ಡಾ|| ಎನ್. ಹೆಚ್.ಆಯಾಚಿತ್ ಕುಲಸಚಿವರು , ಕೇ. ಎಲ್. ಇ.ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ ಇವರು ದಿಕ್ಸೂಚಿ ಭಾಷಣಗೈದರು.ಸಂಪನ್ಮೂಲ ವ್ಯಕ್ತಿಯಾಗಿ *ನ್ಯಾನೋ ವಸ್ತುಗಳು* ಕುರಿತು ಉಪನ್ಯಾಸ ನೀಡಿದರು.ದ್ವಿತೀಯ ಸಂಪನ್ಮೂಲ ವ್ಯಕ್ತಿ ಯಾದ ಡಾ ||ಬಿ.ಜಿ. ಹೆಗಡೆ  ಪ್ರಾಧ್ಯಾಪಕರು ಮತ್ತು ಚೇರಮೆನ್ ಭೌತಶಾಸ್ತ್ರ ವಿಭಾಗ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ  ಬೆಳಗಾವಿ,ಇವರು *ನ್ಯಾನೋ ಸಿಂತೆಸಿಸ್* ವಿಷಯದ ಕುರಿತು ಉಪನ್ಯಾಸಗೈದರು . ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ|| ಶ್ರೀಧರ್ ಪಿ. ಎಮ್.  ಸಹಪ್ರಾಧ್ಯಾಪಕರು  ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ತುಮಕೂರು ಇವರು *ನ್ಯಾನೋ ತಂತ್ರಜ್ಞಾನದಲ್ಲಿ ನೂತನ ಬೆಳವಣಿಗೆಗಳು* ಕುರಿತು ಉಪನ್ಯಾಸ ನೀಡಿದರು ‌.
ಕಾರ್ಯಕ್ರಮದಲ್ಲಿ 20 ಶಿಬಿರಾರ್ಥಿಗಳು ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ|| ಎಸ್. ಎನ್. ಶೆಟ್ಟಿ ಸಮಾರೋಪ ಭಾಷಣಗೈದರು.. ಕುಮಾರ ವಿವೇಕ ಹೆಗಡೆ , ಕುಮಾರ ಕಾರ್ತಿಕ ಶೆಟ್ಟಿ ತಾಂತ್ರಿಕ ಸಹಾಯ ಮಾಡಿದರು. ಡಾ|| ಚೇತನ ಪೈ ವಂದಿಸಿದರು.

ಕೆನರಾ ಕಾಲೇಜು ಸೊಸೈಟಿ ಯ ಅಧ್ಯಕ್ಷ ರು ಶ್ರೀ ರಘು ಪಿಕಳೆ, ಚೇರ್ ಮನ್ ಶ್ರೀ ಎಮ್ . ವಾಯ್ ಪ್ರಭು , ಕಾರ್ಯದರ್ಶಿಗಳು  ಶ್ರೀ ವಿನೋದ ಪ್ರಭು  ಮತ್ತು ಸಮಸ್ತ ಆಡಳಿತ ಮಂಡಳಿಯವರು , ಪ್ರಾಧ್ಯಾಪಕವ್ರಂದ, ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜನೆಗೆ ಸಂಪೂರ್ಣ ಸಹಕಾರ ನೀಡಿ ಅಭಿನಂದಿಸಿದರು‌.

ವಿಸ್ಮಯ ನ್ಯೂಸ್ ಕುಮಟಾ

ಪಂಡಿತ್ ಶಂಕರ್ ಗುರೂಜಿಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Related Articles

Back to top button