Follow Us On

Google News
Job News
Trending

Free Job Alert 2023: MESCOM Recruitment: 200 ಹುದ್ದೆಗಳು

ಇಂದೇ ಅರ್ಜಿ ಸಲ್ಲಿಸಿ

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ( MESCOM Recruitment) ನಲ್ಲಿ ಒಟ್ಟು 200 ಹುದ್ದೆಗಳು ಖಾಲಿಯಿದ್ದು, ಇದರ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದೆ. ( Free Job Alert 2023) ಸೆಪ್ಟೆಂಬರ್ 12, ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಬಿಎ, ಬಿ.ಎಸ್ಸಿ, ಬಿ.ಕಾಂ, ಬಿಸಿಎ ಹಾಗು ಬಿಬಿಎ ಪದವಿ ಪೂರ್ಣಗೊಳಿಸಿರುವವರು ಕೂಡಾ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಧಿಸೂಚನೆಯಲ್ಲಿ ನೀಡಿದ ಸಂಪೂರ್ಣ ವಿವರವನ್ನು ಈ ಕಳಗೆ ನೀಡಿದ್ದು, ಆಸಕ್ತರು ಇವುಗಳನ್ನು ಓದಿಕೊಂಡು, ಅರ್ಜಿಯನ್ನು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್, ಗ್ರಾಜುಯೇಟ್ ಅಪ್ರೆಂಟಿಸ್, ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಮತ್ತು ವೇತನ ನಿಗದಿಪಡಿಸಲಾಗಿದೆ. ಜನರಲ್ ಸ್ಟೀಮ್ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ 9 ಸಾವಿರ, ಗ್ರಾಜುಯೇಟ್ ಅಪ್ರೆಂಟಿಸ್ 9 ಸಾವಿರ, ಹಾಗು ಟೆಕ್ನಿಷಿಯನ್ ಡಿಪ್ಲೊಮಾ ಅಪ್ರೆಂಟಿಸ್ ಮಾಸಿಕ 8 ಸಾವಿರ ಆರಂಭಿಕ ವೇತನ ನಿಗದಿಯಾಗಿದೆ.

( Free Job Alert 2023) ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲವಾಗಿದ್ದು, ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಸೆಪ್ಟೆಂಬರ್ 12 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಕಂಪೆನಿಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್
ಒಟ್ಟು ಹುದ್ದೆಗಳು200
ಅರ್ಜಿ ಸಲ್ಲಿಕೆಗೆ ಕೊನೆಯ ದಿನಸೆಪ್ಟೆಂಬರ್ 12, 2023
ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button