Important
Trending

Theft: ಮನೆಯ ಕಿಟಕಿ ಮುರಿದು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ಹಣ ಕಳ್ಳತನ

ಶಿರಸಿ: ಮನೆಯ ಕಿಟಕಿಯನ್ನು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕಳ್ಳತನ (Theft) ಮಾಡಿದ ಘಟನೆ ನಗರದ ಅಯೋಧ್ಯಾ ಕಾಲೋನಿಯಲ್ಲಿ ನಡೆದಿದೆ. ದೇವರ ಕೋಣೆಯಲ್ಲಿದ್ದ 5 ಲಕ್ಷ 28 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ( gold jewellery ) ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದಾರೆ.

ನಗರದ ಅಯೋಧ್ಯಾ ಕಾಲೋನಿ ಯಲ್ಲಿರುವ ಆಶೀಶ ವಿಲಾಸ ಲೊಖಂಡೆ ಎಂಬುವರ ಮನೆಯ ಕಿಟಕಿಯ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ ಮನೆಯೊಳಗೆ ನುಗ್ಗಿದ ಕಳ್ಳರು ಈ ದುಷ್ಕೃತ್ಯ ಎಸಗಿದ್ದಾರೆ. ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳದವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ (Theft) ವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಅಪರಾಧ ವಿಭಾಗದ ಸಿಬ್ಬಂದಿಗಳ ತಂಡವನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ. ಶಿರಸಿ ಗ್ರಾಮೀಣ ಠಾಣೆ ಪಿಎಸ್‌ಐ ಸೀತಾರಾಮ ಪಿ, ಪಿ.ಎಸ್.ಐ ಗಳಾದ ಮಹಾಂತೇಶ ಕುಂಬಾರ, ರಾಜಕುಮಾರ, ಪ್ರತಾಪ, ದಯಾನಂದ ಜೊಗಳೇಕರ ಸೇರಿ ನುರಿತ ಅಪರಾಧ ಸಿಬ್ಬಂದಿಗಳ ತಂಡ ರಚನೆ ಮಾಡಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button