ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕಳ್ಳತನ: ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿ

ಭಟ್ಕಳ: ಸಂಬಂಧಿಕರ ಮನೆಗೆ ಹೋಗಿ ಬರುವುದರೊಳಗಾಗಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ  ಪರಾರಿಯಾಗಿರುವ ಘಟನೆ ರಹಮತಾಬಾದಿನಲ್ಲಿ ನಡೆದಿದೆ . ತಾಲೂಕಿನ  ರಹಮತಾಬಾದ ನಿವಾಸಿ ಶ್ರೀಮತಿ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಎಂಬುವವರ ಮನೆಯನ್ನು ಕಳ್ಳತನ ಮಾಡಲಾಗಿದೆ.

36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ

ಇವರೆಲ್ಲ ಸಂಬಂಧಿಕರ ಮನೆಗೆ ಹೋಗಿ ಬರುವುದಲೊಳಗಾಗಿ ಮನೆಯ ಬಾಗಿಲನ್ನು ಮುರಿದು ಮಲಗುವ ಕೋಣೆಯ ಕಪಾಟಿನಲ್ಲಿ ಇದ್ದ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಹಾಗು ಇಬ್ಬರ ಮಕ್ಕಳಿಗೆ ಸೇರಿದ ಸುಮಾರು 325 ಗ್ರಾಂ ತೂಕದ 14,60,000 ಮೌಲ್ಯದ ಚಿನ್ನಾಭರಣ ದೋಚಿ  ಪರಾರಿಯಾಗಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ, ಭಟ್ಕಳ

land for sale
Exit mobile version