Focus News
Trending

ಕಾಲುಜಾರಿ ತೆರೆದ ಬಾವಿಗೆ ಬಿದ್ದಿದ್ದ ಮೂರು ಎಮ್ಮೆಗಳನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ಭಟ್ಕಳ: ಆಕಸ್ಮಿಕವಾಗಿ ಕಾಲುಜಾರಿ ತೆರೆದ ಬಾವಿಗೆ ಬಿದ್ದಿದ್ದ ಮೂರು ಎಮ್ಮೆಗಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಪಟ್ಟಣದ ಬೆಳಲಖಂಡ ಗ್ರಾಮದಲ್ಲಿ ನಡೆದಿದೆ. ಮೇವು ತಿನ್ನಲು ಬಾವಿಯ ಸಮೀಪ ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಲಖಂಡ ಗ್ರಾಮದಲ್ಲಿ ಮೇವು ತಿನ್ನಲು ಬಂದ ವೇಳೆ ಮೂರು ಎಮ್ಮೆಗಳು ಆಕಸ್ಮಿಕವಾಗಿ ಕಾಲುಜಾರಿ ಆಳದ ತೆರೆದ ಬಾವಿಗೆ ಬಿದ್ದಿರುವದನ್ನು ಗಮನಿಸಿದ ಸ್ಥಳೀಯರುಮ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದರು.

ತವರು ಮನೆಯಿಂದ ಗಂಡನ ಮನೆಗೆ ಹೋಗುತ್ತೇನೆಂದು ಹೋದ ಮಹಿಳೆ ನಾಪತ್ತೆ: ಈಕೆಯ ಕುರಿತು ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಿ

ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣಾಧಿಕಾರಿ ಎಸ್.ರಮೇಶ, ಸಿಬ್ಬಂದಿಗಳೊಡನೆ ತೆರಳಿ ಸಾರ್ವಜನಿರಕ ಸಹಾಯ ಪಡೆದು ಜಲವಾಹನದ ಹಗ್ಗ ಹಾಗೂ ಹೋಸ್ ಗಳ ಸಹಾಯದಿಂದ ಮೂರು ಎಮ್ಮೆಗಳನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಟ್ಕಳ ಅಗ್ನಿಶಾಮಕ ದಳ ಸಿಬ್ಬಂದಿ ,ಎಸ್.ಡಿ.ಆರ್.ಆಫ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

land for sale

Related Articles

Back to top button