ತವರು ಮನೆಯಿಂದ ಗಂಡನ ಮನೆಗೆ ಹೋಗುತ್ತೇನೆಂದು ಹೋದ ಮಹಿಳೆ ನಾಪತ್ತೆ: ಈಕೆಯ ಕುರಿತು ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಿ

ಅಂಕೋಲಾ: ಚೌತಿ ಹಬ್ಬಕ್ಕೆಂದು ತವರು ಮನೆಗೆ ಬಂದು ಮರಳಿ ಹೋಗಿದ್ದ ವಿವಾಹಿತ ಮಹಿಳೆ ಕಾಣೆ ಆಗಿರುವ ಕುರಿತು ಆಕೆಯ ತಾಯಿ  ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.  ತಾಲೂಕಿನ ಮೊಗಟಾ ನಿವಾಸಿ ಕುಸುಮಾ ಗಣಪತಿ ಅಂಬಿಗ (39) ಕಾಣೆಯಾದ ಮಹಿಳೆ.

10ನೇ ತರಗತಿ ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಈಕೆ ಗಣೇಶ ಚತುರ್ಥಿಗೆ ಮಿರ್ಜಾನ ತಾರಿಬಾಗಿಲಿನ ತನ್ನ ತವರು ಮನೆಗೆ ಬಂದು ಸೆಪ್ಟೆಂಬರ್ 6 ರಂದು ಅಂಕೋಲಾ ತಾಲೂಕಿನ ಮೊಗಟಾದಲ್ಲಿರುವ ತನ್ನ ಗಂಡನ ಮನೆಗೆ ಮರಳಿ ಹೋಗುತ್ತೇನೆ ಎ೦ದು ಹೇಳಿ ಹೋದವಳು, ಅಂದಿನಿಂದ ಇಂದಿನ ವರೆಗೂ ಯಾವುದೇ ಪೋನ್ ಸಂಪರ್ಕ ಮಾಡದೇ ಮರಳಿ ಮನೆಗೂ ಬಾರದೇ ಕಾಣೆಯಾಗಿದ್ದು ಮಗಳನ್ನು ಹುಡುಕಿ ಕೊಡುವಂತೆ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಫೋಟೋದಲ್ಲಿರುವ ಮಹಿಳೆ ಎಲ್ಲಿಯಾದರೂ ಕಂಡುಬಂದಲ್ಲಿ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.   

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

land for sale
Exit mobile version