Follow Us On

Google News
Important
Trending

ಅಂಕೋಲಾದಲ್ಲಿಂದು 32 + 4 ಕೇಸ್ : ನಾಲ್ವರು ಗುಣಮುಖ

220ಕ್ಕೆ ತಲುಪಿದ ತಾಲೂಕಿನ ಒಟ್ಟು ಸೋಂಕಿತರ ಸಂಖ್ಯೆ, 61 ಸಕ್ರೀಯ ಕೇಸ್
ಮತ್ತೆ ನಾಲ್ಕು ಹೊಸ ಪ್ರಕರಣ

[sliders_pack id=”3491″]

ಅಂಕೋಲಾ : ತಾಲೂಕಿನಲ್ಲಿ ಮಂಗಳವಾರ ಹಲವರ ಪಾಲಿಗೆ ಅಮಂಗಲವಾದಂತಿದ್ದು ಒಂದೇ ದಿನ ಒಟ್ಟೂ 36 ಕರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದೆ, ಈ ಮೂಲಕ ತಾಲೂಕಿನಲ್ಲಿ ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 220ಕ್ಕೆ ತಲುಪಿದೆ. ಗುಣಮುಖರಾದ 4 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 61 ಸಕ್ರೀಯ ಸೋಂಕಿನ ಪ್ರಕರಣಗಳಿವೆ. ಸೂರ್ವೆ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ 30 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.(ಇಂದಿನ ಆರೋಗ್ಯ ಇಲಾಖೆಯ ಹೆಲ್ತಬುಲೆಟಿನ್‍ನಲ್ಲಿ 32 ಸೋಂಕಿನ ಪ್ರಕರಣಗಳು ಧೃಡಪಟ್ಟಿದ್ದು, ಹೆಲ್ತಬುಲೆಟಿನ್ ಬಿಡುಗಡೆ ನಂತರ ದಾಖಲಾದ 4 ಹೊಸ ಸೋಂಕಿನ ಪ್ರಕರಣಗಳು ನಾಳೆಯ ಬುಲೆಟಿನ್‍ನಲ್ಲಿ ಧೃಡಗೊಳ್ಳಬೇಕಿದೆ.

ಪಟ್ಟಣ ವ್ಯಾಪ್ತಿಯ ಕೋಟೆವಾಡದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದು ದಿನವೊಂದರಲ್ಲೇ 14 ಪ್ರಕರಣಗಳು ದಾಖಲಾಗಿ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇವೆಲ್ಲವೂ ಈ ಹಿಂದಿನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ. ಉಳಿದಂತೆ ಕ್ಯಾಕಣಿ-ಶಿವಪುರದಲ್ಲಿ 8, ಹೊಸುರಿನಲ್ಲಿ 6, ಹಾರವಾಡದಲ್ಲಿ 2, ಅಜ್ಜಿಕಟ್ಟಾದಲ್ಲಿ 1, ಕೋಡಸಣಿಯಲ್ಲಿ 1, ಹುಲಿದೇವರವಾಡದಲ್ಲಿ 2 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ. ಸೂರ್ವೆಯಲ್ಲಿ ನಿನ್ನೆ ಕಾಣಿಸಿಕೊಂಡ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ ಆತನ ಕುಟುಂಬದ 2 ಸದಸ್ಯರಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ ಎನ್ನಲಾಗಿದೆ.

ತಾಲೂಕಿನ ಪಟ್ಟಣ ಮತ್ತು ಗ್ರಾಮೀಣ ವ್ಯಾಪ್ತಿ ಸೇರಿ ದಿನವೊಂದರಲ್ಲಿಯೇ ಗರಿಷ್ಠ ಪ್ರಕರಣಗಳು ದಾಖಲಾಗಿರುವುದು ಹಲವರ ನೆಮ್ಮದಿಗೆ ಭಂಗ ತಂದಿದ್ದು, ಕೋವಿಡ್‍ನ ಅನಿಶ್ಚಿತ ಆಟವು ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆಗೆ ಇನ್ನಷ್ಟು ಸವಾಲೊಡ್ಡುತ್ತಿದೆ. ಸಾರ್ವಜನಿಕರನೇಕರು ಆತಂಕದಿಂದ ಚರ್ಚೆಯಲ್ಲಿ ತೊಡಗಿದ್ದರೆ, ಇನ್ನು ಕೆಲವರು ಕರೊನಾ ಈಗ ಸಾಮಾನ್ಯವಾಗಿ ಬಿಟ್ಟಿದೆ ಎಂಬಂತೆ ನಿರುಮ್ಮಳವಾಗಿದ್ದಂತೆ ಕಂಡುಬರುತ್ತಿದೆ. ಅಲ್ಲಲ್ಲಿ ಕರೊನಾ ಚಿಕಿತ್ಸೆಯ ಕುರಿತು ಸಂಶಯದ ಮಾತುಗಳು ಕೇಳಿಬರುತ್ತಿವೆ.

ವಿಷಯ ಏನೇ ಇದ್ದರು ಸಾರ್ವಜನಿಕರು ಎಲ್ಲವನ್ನೂ ಹಗುರಾಗಿ ಪರಿಗಣಿಸದೇ ತಮ್ಮ ಮತ್ತು ಕುಟುಂಬ ಹಾಗೂ ಸಮುದಾಯದ ಆರೋಗ್ಯ ಕಾಳಜಿಯಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳುವದರ ಜೊತೆಯಲ್ಲಿಯೇ ಕರೋನಾ ವಾರಿಯರ್ಸಗಳಿಗೆ ಸಹಕರಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button