ಮಾಹಿತಿ
Trending

ಕೆರೆಯಲ್ಲಿ ಪತ್ತೆಯಾದ ಅಪರಿಚಿತ ಹೆಂಗಸಿನ ಶವ

ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ
ಕೊರಳಲ್ಲಿ ಜಪ ಮಣಿ ಸರ ಇದೆ.

ಜೊಯಿಡಾ: ತಾಲೂಕಿನ ಹೆಣಕೊಳ ಅರಣ್ಯ ತನಿಖಾ ಠಾಣೆಯ ಹಿಂದೆ ಅರಣ್ಯದಲ್ಲಿನ ಕೆರೆಯಲ್ಲಿ ಅಪರಿಚಿತ ಹೆಂಗಸಿನ ಶವ ಪತ್ತೆಯಾಗಿದ್ದು, ಜೊಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಪರಿಚಿತ ಹೆಂಗಸು ಕೆಂಪು ಮೈಬಣ್ಣ ಹೊಂದಿದ್ದು, ಅಂದಾಜು 55 ವರ್ಷ ಪ್ರಾಯ, ದುಂಡು ಮುಖ ಕಪ್ಪು ಬಣ್ಣದ ಬ್ಲೌಜ್, ಕಂದು ಬಣ್ಣದ ಚಿತ್ತಾರ ಇರುವ ಸೀರೆ ಹಾಗೂ ಕಂದು ಬಿಳಿ ಬಣ್ಣದ ಚಪ್ಪಲಿ ದರಿಸಿದ್ದು, ಎಲೆ ಅಡಕಿ ಚೀಲ, ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಝಂಡುಬಾಮ್ ಬಾಟಲಿ, ಕೊರಳಲ್ಲಿ ಸಂತರು ಧರಿಸುವ ಜಪ ಮಣಿ ಸರ ಇದೆ.

ಈ  ಅಪರಿಚಿತ ಹೆಂಗಸಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಪೋಲಿಸ್ ಅಧಿಕ್ಷಕರು ಕಾರವಾರ ಅಥವಾ ಜೊಯಿಡಾ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 08383 282733 ಅಥವಾ ಸಿಪಿಐ ಜೊಯಿಡಾ 9480805237 ಪಿಎಸ್ ಐ ಜೊಯಿಡಾ 9480805266 ಸಂಖ್ಯೆಗೆ ಸಂಪರ್ಕಿಸಿ ಎಂದು ಪೋಲಿಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ಜೋಯ್ಡಾ

Back to top button