Follow Us On

WhatsApp Group
Focus NewsImportant
Trending

ಮಹಿಳಾ ಪಿ ಎಸ್ ಐ ವರ್ಗಾವಣೆ: ಹಾಸಭಾವಿ ಶಿರ್ಸಿಗೆ: ಗೀತಾ ಪಿ. ಶಿರ್ಸಿಕರ್ ಅಂಕೋಲಾಕ್ಕೆ .

ಅಂಕೋಲಾ: ತಾಲೂಕಿನ ನೂತನ ಮಹಿಳಾ ಪಿ.ಎಸ್.ಐ ಆಗಿ ಗೀತಾ ಪಿ ಶಿರ್ಸಿಕರ್ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಅಂಕೋಲಾ  ಪೊಲೀಸ್ ಠಾಣೆಯಿಂದ ಪಿ.ಎಸ್. ಐ ಮಾಲಿನಿ ಹಾಸಬಾವಿ ಅವರು ಶಿರ್ಸಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಅವರ ತೆರವಾದ ಸ್ಥಾನಕ್ಕೆ ಗೀತಾ ಪಿ. ಶಿರ್ಸಿಕರ್ ಅವರನ್ನು ಪದೋನ್ನತಿ ಗೊಳಿಸಲಾಗಿತ್ತು.

10ನೇ ತರಗತಿ ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಮೂಲತಃ ಶಿರಸಿಯ ಗ್ರಾಮೀಣ ಪ್ರದೇಶವಾದ ಅಚ್ಚನಳ್ಳಿಯವರಾದ ಗೀತಾ  ಅವರು 1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಜಿಲ್ಲೆಯ ಸಿದ್ಧಾಪುರ, ಶಿರಸಿ ಗ್ರಾಮೀಣ, ಶಿರಸಿ ನಗರ ಠಾಣೆ, ಹೊನ್ನಾವರ ಪೊಲೀಸ್ ಠಾಣೆ, ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗಳಲ್ಲಿ ಸುಮಾರು 27 ವರ್ಷಗಳ ಕಾಲ ಇಲಾಖೆಯ ವಿವಿಧ ಹುದ್ದೆಗಳಲ್ಲಿ  ಕರ್ತವ್ಯ ನಿರ್ವಹಿಸಿ ಈಗ ಪದೋನ್ನತಿ ಹೊಂದಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್. ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ಅಂಕೋಲಾದಲ್ಲಿ ಅತ್ಯಂತ ಕಡಿಮೆ ಅವಧಿಯಸೇವಿಸಲ್ಲಿಸಿ ಸಿರ್ಸಿಗೆ ವರ್ಗಾವಣೆಗೊಂಡಿರುವ ಮಾಲಿನಿ ಹಾಸಬಾವಿ ಅವರು ತಮ್ಮ ವ್ಯಕ್ತಿತ್ವದ ಮೂಲಕ  ತಾಲೂಕಿನ ಜನತೆಯ ಮನ ಗೆದ್ದಿದ್ದು ಹೊಸ ಅಧಿಕಾರಿಯಾಗಿರುವ ಗೀತಾ ಶಿರ್ಸಿಕರ ಅವರು ಜನಪರ ಅಧಿಕಾರಿಯಾಗಿ ಗುರುತಿಸಿಕೊಳ್ಳುವಂತಾಗಲಿ ಎನ್ನುವುದು ತಾಲೂಕಿನ ಪ್ರಜ್ಞಾವಂತ ಜನತೆಯ ಆಶಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button