Focus NewsImportant
Trending

ಬಿಜೆಪಿ ಪ್ಲೆಕ್ಸ್ ಓಕೆ, ಆಮ್ ಆದ್ಮಿ ಪ್ಲೆಕ್ಸ್ ಗೆ ವಿರೋಧ ಯಾಕೆ: ಆಮ್ ಆದ್ಮಿ ಪ್ಲೆಕ್ಸ್ ಗೆ ಹೆದರಿದರಾ ರಾಷ್ಟ್ರೀಯ ಪಕ್ಷಗಳು?

ಸಿದ್ದಾಪುರ : ಸಿರ್ಸಿ ಸಿದ್ದಾಪುರದಲ್ಲಿ ರಸ್ತೆ ಪಕ್ಕದಲ್ಲಿ ಹಾಕಲಾದ ಆಮ್ ಆದ್ಮಿ ಪಕ್ಷದ ಪ್ಲೆಕ್ಸ್ ಗಳನ್ನು ನಮ್ಮ ಗಮನಕ್ಕೆ ತರದೇ ಏಕಾಏಕಿ ರಾಜಕೀಯ ದುರುದ್ದೇಶದಿಂದ ತೆರವು ಮಾಡಿದ್ದಾರೆ.ರಾಷ್ಟ್ರೀಯ ಪಕ್ಷಗಳು ಆಮ್ ಆದ್ಮಿ ಪ್ಲೆಕ್ಸ್ ಗೆ ಹೆದರಿ ನಮ್ಮ ಬೆಳವಣಿಗೆ ಸಹಿಸಲಾಗದೆ ಈ ರೀತಿಯ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆಮ್ ಆದ್ಮಿ ಜಿಲ್ಲಾ ಮುಖಂಡ ಹಿತೇಂದ್ರ ನಾಯ್ಕ್ ಹೇಳಿದರು. ಅವರು ಪಟ್ಟಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ತಿಳಿಸಿದರು.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ?

ಫ್ಲೆಕ್ಸ್ ರಾಜಕಾರಣ ಸಿರ್ಸಿ ಸಿದ್ದಾಪುರಕ್ಕೂ ಎಂಟ್ರಿ ಕೊಟ್ಟಂತಿದೆ ಸಿದ್ದಾಪುರದ ಗಡಿಭಾಗ ತಾಳಗುಪ್ಪ ದಿಂದ ಶುರು ಆಗಿ ಮುಂದಕ್ಕೆ ಸೊರಬ ಕ್ಷೇತ್ರದ ಬಿಜೆಪಿ ರಾಜು ತಾಲ್ಲೂರು ಅವರ 60 ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಅವುಗಳಿಗೆ ಅನುಮತಿ ತೆಗೆದುಕೊಂಡಿರುವ ಬಗ್ಗೆ ಹುಡುಕಿದಾಗ ಅನುಮತಿ ತೆಗೆದುಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲಿ ಚಕಾರ ಎತ್ತದ ರಾಜಕೀಯ ಪಕ್ಷದವರು ಸಿರ್ಸಿ ಕ್ಷೇತ್ರದ ವ್ಯಾಪ್ತಿಯಲ್ಲಿ ಫಿಕ್ಸ್ ಮಾಡಿದ ಕೇವಲ 5 ಫ್ಲೆಕ್ಸ್ ಗಳಿಗೆ ಆಕ್ಷೇಪ ಎತ್ತಿರುವುದು ನೋಡಿದರೆ ಆಮ್ ಆದ್ಮಿ ಪಕ್ಷದ ಮೇಲೆ ರಾಷ್ಟ್ರೀಯ ಪಕ್ಷಗಳಿಗೆ ಎಷ್ಟು ಭಯ ಶುರುವಾಗಿದೆ ಎಂದು ಗೊತ್ತಾಗುತ್ತದೆ.

ಕೆಟ್ಟೋಗಿರೋ ರಸ್ತೆಗಳ ಬಗ್ಗೆ ಜನರ ಕೂಗು ಕೇಳಿಸಿಕೊಳ್ಳದ ಲೋಕೋಪಯೋಗಿ ಅವರು ಫ್ಲೆಕ್ಸ್ ತೆರವು ಗೊಳಿಸುವುದರಲ್ಲಿ ನಮಗೆ ಹೈ ಲೇವಲ್ ಪ್ರೆಷರ್ ಇದೆ ಎಂದು ಅಧಿಕಾರಿಗಳು ಎಂದಾಗಲೇ ಜನರಿಗೆ ಅರ್ಥ ಆಗುತ್ತೆ ಇದರ ಹಿಂದೆ ಯಾರಿದ್ದಾರೆ ಎಂದು? ಸಿರ್ಸಿ ಸಿದ್ದಾಪುರದಲ್ಲಿ ಯಾವುದೇ ಅಭಿವೃದ್ಧಿ ಮಾಡದ ರಾಜಕೀಯ ಪಕ್ಷಗಳು ಆಮ್ ಆದ್ಮಿ ಪಕ್ಷದ ಆಗಮನದಿಂದ ತತ್ತರಿಸಿ ಹೋಗಿದ್ದಾರೆ. ಸಿರ್ಸಿ ಸಿದ್ದಾಪುರ ಜನರಿಗೆ ಒಂದು ಆಸ್ಪತ್ರೆ ಇಲ್ಲ, ಓದಿದ ಹುಡುಗರಿಗೆ ಉದ್ಯೋಗ ಮಾಡಲು ಒಂದು ಕಂಪನಿಗಲಿಲ್ಲ, ಮಹಿಳೆಯರಿಗೆ ಕೆಲಸ ಮಾಡಲು ಒಂದು ಗಾರ್ಮೆಂಟ್ ಇಲ್ಲ. ಮಕ್ಕಳಿಗೆ ಶಾಲೆಗೆ ಹೋಗಲು ಸರಿಯಾಗಿ ಬಸ್ಸುಗಳಿಲ್ಲ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದೂ ಮದ್ಯ ವ್ಯಸನಿ ಮನೆಯ ವಿದ್ಯಾರ್ಥಿ ಗಳು ಮಹಿಳೆಯರು ದಿನನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಅದ್ಯಾವುದಕ್ಕೂ ತಲೆಕೆಡಿಸಿ ಕೊಳ್ಳದ ಈ ರಾಜಕಾರಣಿಗಳು ಕೇವಲ ಫ್ಲೆಕ್ಸ್ ಗೆ ಇಷ್ಟೊಂದೆಲ್ಲಾ ತಲೆ ಕೆಡಿಸಿಕೊಂಡಿರುವುದು ವಿಷಾದನೀಯ ಎಂದರು.

ಅಷ್ಟಕ್ಕೂ ಫ್ಲೆಕ್ಸ್ ರೆಡಿ ಮಾಡಿ ಸ್ಟಿಕ್ಕರ್ ಫಿಟ್ ಮಾಡಿ, ಲೊಕೇಶನ್ ಫಿಕ್ಸ್ ಮಾಡಿ, ಸಂಬಂಧ ಪಟ್ಟ ಇಲಾಖೆಯಿಂದ ಪರ್ಮಿಷನ್ ತೆಗೆದುಕೊಂಡು ಹಾಕುವಂತೆ ಶ್ರೀದೇವಿ ಅಡ್ವಟೈಸಿಂಗಗ ಅವರಿಗೆ ಆಮ್ ಆದ್ಮಿ ಗುತ್ತಿಗೆ ಕೊಟ್ಟಿದ್ದು ಸಂಪೂರ್ಣ ಜವಾಬ್ದಾರಿ ಅವರದ್ದಾಗಿರುತ್ತದೆ. ಇಷ್ಟೂ ಗೊತ್ತಿಲ್ಲದವರಿಗೆ ನಾನು ಏನೆಂದು ಹೇಳಲಿ ಎಂದರು. ಕಾಗೇರಿ ಅವರಿಗೆ ಅವಮಾನ ಮಾಡುವ ಪ್ರಯತ್ನ ಎಂದು ಪತ್ರಿಕೆಯಲ್ಲಿ ಬರೆದಿದ್ದಾರೆ. ಇದರಲ್ಲಿ ಮಾನ್ಯ ಕಾಗೇರಿ ಅವರನ್ನು ಅವಮಾನ ಮಾಡುವ ಒಂದೇ ಒಂದು ಶಬ್ದ ಇದ್ದರೆ ತೋರಿಸಿ. ನಾವು ಪ್ರಜಾ ಪ್ರಭುತ್ವ ವ್ಯವಸ್ಥೆ ಅಲ್ಲಿ ಇದ್ದೀವೋ ಅಥವಾ ಸರ್ವಧಿಕಾರ ದೋರಣೆ ಅಲ್ಲಿದ್ದಿವೋ. ಇಲ್ಲಿ ಯಾರೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುವಂತಿಲ್ಲ ಎಂದು ಕಾನೂನು ತಂದು ಬಿಡಿ ಎಂದರು.

ಜನರೇ ಉತ್ತರ ಕೊಡುತ್ತಾರೆ

ಇಷ್ಟಕ್ಕೂ ನೀವು ಆಮ್ ಅದ್ಮಿಯ ಫ್ಲೆಕ್ಸ್ ತೆರವು ಗೊಳಿಸಿರಬಹುದು ಆದರೆ ಜನರ ಮನಸ್ಸಿನಲ್ಲಿ ಆಮ್ ಆದ್ಮಿ ಬಗ್ಗೆ ಇರುವ ಒಲವನ್ನು ಬದಲಾಯಿಸಲು ಆಗುವುದಿಲ್ಲ. ಅದು ದೀಪಾವಳಿಯಲ್ಲಿ ಎಷ್ಟೋ ಜನ ಅವರ ಮನೆ ಮುಂದೆ ಒನ್ ಚಾನ್ಸ್ ಟು ಆಮ್ ಆದ್ಮಿ ಅಂತ ಬರೆದಿರುವುದು, ಎತ್ತುಗಳು ಎಮ್ಮೆಗಳು, ಆರತಿ ತಟ್ಟೆಗಳು ಹೀಗೆ ಕಂಡಕಂಡಲ್ಲಿ ಆಮ್ ಆದ್ಮಿ ಅಂತ ಬರೆದು ತಮ್ಮ ಭಾವನೆಗನ್ನು ವ್ಯಕ್ತ ಪಡಿಸಿರುವುದರಲ್ಲೇ ಗೊತ್ತಾಗುತ್ತದೆ. ಸಿರ್ಸಿ ಸಿದ್ದಾಪುರದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದ ಇವರ ದ್ವೇಷದ ರಾಜಕಾರಣವನ್ನು ಜನ ನೋಡುತ್ತಿದ್ದಾರೆ. ಕಾಲ ಬಂದಾಗ ಜನರೇ ಉತ್ತರ ಕೊಡುತ್ತಾರೆ ಎಂದರು.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ ಸಿದ್ದಾಪುರ

Back to top button