Focus News
Trending

ಮಿರ್ಜಾನಿನ ಬಿಜಿಎಸ್‌ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ಕುಮಟಾ:ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್, ಕುಮಟಾ ದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಯನ್ನು ಆಚರಿಸಲಾಯಿತು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಲೀನಾ ಎಂ. ಗೊನೇಹಳ್ಳಿಯರುದೇಶದ ಮೊದಲ ಗೃಹ ಸಚಿವರಾಗಿದ್ದಂತಹ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಭಾರತದ ಏಕತೆಗಾಗಿ ಶ್ರಮಿಸಿದವರು. 

ಸ್ವಾತಂತ್ರ್ಯ ಸಿಕ್ಕಿದ ಮೇಲೂ ಕೆಲವೊಂದು ಭೂ ಪ್ರದೇಶಗಳು ರಾಜರ ಮತ್ತು ವಿದೇಶಿಗರ ವಶದಲ್ಲಿದ್ದವು. ಇದನ್ನು ವಶಪಡಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ  ಕಾರಣರಾದವರು ಪಟೇಲ್ ಅವರು. ಪಟೇಲ್ ಅವರ  ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನಾಗಿಆಚರಣೆ ಮಾಡಲಾಗುತ್ತದೆ ಎಂದರು.

ಬಿಜೆಪಿ ಪ್ಲೆಕ್ಸ್ ಓಕೆ, ಆಮ್ ಆದ್ಮಿ ಪ್ಲೆಕ್ಸ್ ಗೆ ವಿರೋಧ ಯಾಕೆ: ಆಮ್ ಆದ್ಮಿ ಪ್ಲೆಕ್ಸ್ ಗೆ ಹೆದರಿದರಾ ರಾಷ್ಟ್ರೀಯ ಪಕ್ಷಗಳು?

ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು  ನಾವೆಲ್ಲರೂ ಭಾರತೀಯರು, ಯಾವುದೇ ಜಾತಿ ಮತ ಬೇಧವಿಲ್ಲದೇ ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುತ್ತೇವೆ ಎಂದು ಪ್ರಮಾಣ ಮಾಡಿದರು. ಕೃಷ್ಣಪ್ರಸಾದ ಮತ್ತು ಸಂಗಡಿಗರು ಪ್ರಾರ್ಥಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಎನ್.‌ ವಿಶಾಲ್‌ ನಿರ್ವಹಿಸಿದನು.  ಸಂಜನಾ ಎಂ. ಜಿ ಮತ್ತು ತಂಡದವರು ಹಾಗೂ ಪ್ರತಿಜ್ಞಾ ಮತ್ತು ತಂಡದವರು ಸುಮಧುರ ಗೀತೆಯನ್ನು ಹಾಡಿದರು.  ಪಟೇಲ್ ಕುರಿತು ವಿದ್ಯಾರ್ಥಿಗಳೇ ಚಿತ್ರಿಸಿದ ಭಿತ್ತಿಪತ್ರ ಮತ್ತು ಮಿರ್ಜಾನಿನಲ್ಲಿ ರಸ್ತೆಯುದ್ದಕ್ಕೂ  ಶಾಲಾ ವಿದ್ಯಾರ್ಥಿಗಳ ಏಕತಾ ಜಾಥಾ ಜನಮನಸೂರೆಗೊಂಡಿತು. ಶಿಕ್ಷಕಿ ಅನುಶ್ರೀ ಪಟಗಾರ, ವಿದ್ಯಾರ್ಥಿಗಳಾದ ಆಯುಷ್‌, ಅಕ್ಷಯ್‌, ಶರಣ್ಯಾ  ಸರದಾರ್‌ ವಲ್ಲಭ ಭಾಯ್ ಪಟೇಲ್ ಬಗ್ಗೆ ಮತ್ತು ರಾಷ್ಟ್ರೀಯ ಏಕತಾ ದಿನಾಚರಣೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು.
 
ತೇಜಲ್‌  ಸ್ವಾಗತಿಸಿದಳು. ಸಂಭ್ರಮ್‌ ವಂದಿಸಿದನು. ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ಸಂಯೋಜಕರಾದ ಶ್ರೀಮತಿ ಅನುರಾಧ ಗುನಗ, ಶಿಕ್ಷಕ ವೃಂದ ಮತ್ತು ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಕುಮಟಾ

Back to top button