Follow Us On

WhatsApp Group
Focus News
Trending

ಪಂಚಾಯತ್ ಸದಸ್ಯನಿಂದ ವಿಧಾನಪರಿಷತ್ ಚುನಾವಣೆ ಬಹಿಷ್ಕಾರ: ತಹಶೀಲ್ದಾರ್ ಗೆ ಮನವಿ

ತಾಲೂಕಿನ ಶಿರಳಗಿ ಗ್ರಾಮಪಂಚಾಯತಿಯ ಮುಗದೂರು ವಾರ್ಡ ಪಂಚಾಯಿತಿ ಸದಸ್ಯ ಮಾರುತಿ ಎನ್ ನಾಯ್ಕ ವಿಧಾನಪರಿಷತ್ ಚುನಾವಣೆ ಬಹಿಷ್ಕರಿಸುವುದಾಗಿ ತಸಿಲ್ದಾರ್ ಸಿದ್ದಾಪುರ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಸಿದ್ದಾಪುರ ರವರಿಗೆ ಮನವಿ ನೀಡಿದ್ದಾರೆ  ಕರ್ನಾಟಕ ವಿಧಾನಪರಿಷತ್ತಿಗೆ ಸ್ಥಳೀಯ ಕ್ಷೇತ್ರ ಸಂಸ್ಥೆಗಳಿಂದ   10-12-2021 ರಂದು ನಡೆಯಲಿರುವ ಚುನಾವಣೆ ಗೆ  ಮತವನ್ನು ಬಹಿಷ್ಕರಿಸುವುದಾಗಿ ತಹಶೀಲ್ದಾರ್ ಪ್ರಸಾದ್ ಎಸ್. ಎ ರವರಿಗೆ ಮನವಿ ನೀಡಿದ್ದಾರೆ .

ಮನವಿಯ ವಿವರಕರ್ನಾಟಕ ವಿಧಾನಪರಿಷತ್ತಿಗೆ ಸ್ಥಳೀಯ ಕ್ಷೇತ್ರ ಸಂಸ್ಥೆಗಳಿಂದ ದ್ವೈವಾರ್ಷಿಕ ಚುನಾವಣೆ 2021 ಕೆ ಈ ಕೆಳಗೆ ಕಾಣಿಸಿದ ಕೆಲವು ಸರ್ಕಾರ ಧೋರಣೆಗಳಿಂದಾಗಿ ಸಾರ್ವಜನಿಕರಿಗೆ ಸ್ಪಂದಿಸಲು ಸದಸ್ಯರಾದ ನಮಗೆ ಕಷ್ಟಸಾಧ್ಯವಾದ್ದರಿಂದ ಲಿಖಿತವಾಗಿ ಸರ್ಕಾರದ ಪ್ರತಿನಿಧಿಗಳು ಸ್ಪಂದಿಸುವ ಶರತ್ತಿಗೆ ಒಳಪಟ್ಟ ಮತದಾನಕ್ಕೆ ಬಹಿಷ್ಕರಿಸುವ ಬಗ್ಗೆ ತಮ್ಮ ಗಮನವನ್ನು ತರಬಯಸುತ್ತೇನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ .

ಬೇಡಿಕೆಗಳು: ಕರ್ನಾಟಕ ಸರ್ಕಾರದಿಂದ ಕಳೆದ ಮೂರು ವರ್ಷಗಳಿಂದ ವಿವಿಧ ವಸತಿ ಯೋಜನೆಯಡಿ ಮನೆ ಬಿಡುಗಡೆ ಆಗಿರದೆ ಇರುವುದರಿಂದ  ನನ್ನ ಮತದಾರರಿಗೆ ಮನೆ ಹಂಚಿಕೆ ಮಾಡಲು ಆಗುತ್ತಿಲ್ಲ ಮನೆ ಹಂಚಿಕೆಯನ್ನು ಮನೆ ನಂಬರ್ ಇರುವ ಬಡ ಕೂಲಿ ಕಾರ್ಮಿಕರಿಗೆ ಹಂಚಲು ಅವಕಾಶ ಮಾಡಿಕೊಡುವುದು 15ನೇ ಹಣಕಾಸು ಯೋಜನೆ ಅಡಿ ನೀಡುವ ಅನುದಾನವನ್ನು ಶೇಕಡ 40 ಅನಿರ್ಬಂಧಿತ ಶೇಕಡ 60 ನಿರ್ಬಂಧಿತ ಅನುದಾನ ಎಂದು ಬಿಡುಗಡೆಗೊಳಿಸಲು ಇದ್ದು ಶೇಕಡ 40 ಅನಿರ್ಬಂಧಿತ ಅನುದಾನದಲ್ಲಿ ಅಭಿವೃದ್ಧಿ ಮಾಡುವುದು ಕಷ್ಟಸಾಧ್ಯ ಕಾರಣ 15ನೇ ಹಣಕಾಸು ಅಡಿಯಲ್ಲಿ ಪೂರ್ಣ ಪ್ರಮಾಣದ ಹಣವನ್ನು ನಿರ್ಬಂಧಿತ ಸದಸ್ಯರು ಅನಿರ್ಬಂಧಿತ ಎಂದು ಪರಿಗಣಿಸಿದೆ ಪೂರ್ಣಪ್ರಮಾಣದಲ್ಲಿ ಕ್ರಿಯಾಯೋಜನೆಗೆ ಹಣ ಬಳಸಲು ಅವಕಾಶ ನೀಡುವುದು. ಗ್ರಾಮ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯಡಿ ನೊಂದಣಿಯಾಗಿರುವ ಕೂಲಿಕಾರ್ಮಿಕರಿಗೆ ಇಲಾಖೆಯಡಿ ಕಾರ್ಮಿಕರಿಂದ ಪರಿಗಣಿಸಿ ಜಾಬ್ ಕಾರ್ಡ್ ಹೊಂದಿರುವ ವರೆಗೂ ಸಹ ಆಹಾರಧಾನ್ಯ ಕಿಟ್ ಇನ್ನಿತರ ಸೌಲಭ್ಯ ನೀಡಲು ಅನುಕೂಲವಾಗುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಈ ಸ್ವತ್ತು ಸಮಸ್ಯೆಯಿಂದ ಬಡ ಕೂಲಿ ಕಾರ್ಮಿಕರಿಗೆ ಮನೆ ನಂಬರ್ ನೀಡಲು ಸಾಧ್ಯವಾಗುತ್ತಿಲ್ಲ ಸರ್ಕಾರದಿಂದ ಬಯಲು ಮುಕ್ತ ಶೌಚಾಲಯ ಗ್ರಾಮ ಎಂದು ಘೋಷಣೆಯಾದ ನಂತರ ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯಗಳ ರಿಪೇರಿ ಬಗ್ಗೆ ಸರ್ಕಾರದಿಂದ ಹಣ ಬಿಡುಗಡೆ ಬಗ್ಗೆ ಕ್ರಮ ಕೈಗೊಳ್ಳುವುದು


ಪಂಚಾಯತ್ ವ್ಯಾಪ್ತಿಯ ವಿವಿಧ ಆಸ್ತಿಗಳ ನಿರ್ವಹಣೆ ಯನ್ನು 15ನೇ ಹಣಕಾಸು ಯೋಜನೆಯಡಿ ನಿರ್ವಹಿಸಲು ಕರ್ನಾಟಕ ಸರ್ಕಾರದಿಂದ ನಿರ್ದೇಶನ ಬಂದಿದ್ದು ಅಂಗನವಾಡಿ ಮತ್ತು ಇನ್ನಿತರೆ ಸಮುದಾಯ ಆಸ್ತಿಗಳ ನಿರ್ವಹಣೆ ಪ್ರತ್ಯೇಕ ಅನುದಾನವನ್ನು ಗ್ರಾಮಪಂಚಾಯತ ಬಿಡುಗಡೆಗೊಳಿಸಲು ಕ್ರಮವಹಿಸುವುದು
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಣ ಹೊಂದಿದ ಮುಖ್ಯಸ್ಥನ ಆಸ್ತಿ ದಾಖಲಾತಿಯನ್ನು ಮರಣ ಹೊಂದಿದ ಮುಖ್ಯಸ್ಥನ ಸರಳ ವಾರಸುದಾರರಿಗೆ ಹೆಂಡತಿ/ ಮಗನಿಗೆ ವರ್ಗಾವಣೆ ಮಾಡಲು ಅಂತರ್ಜಾಲದಲ್ಲಿ ಸಮಸ್ಯೆಯಿದ್ದು ಇದನ್ನು ಸರಳಿಕರಣ ಮಾಡಲು ಕ್ರಮವಹಿಸುವುದು ಹಾಗೂ ಮೂಲ ಮನೆಯಿಂದ ಬೇರ್ಪಟ್ಟ ಕುಟುಂಬಗಳಿಗೆ ಮನೆ ನಂಬರ್ ನೀಡಿ ಮೂಲಸೌಕರ್ಯ ಒದಗಿಸಲು ಸರಳಗೊಳಿಸುವುದು ಮುಂತಾದ ಹಲವು ಬೇಡಿಕೆ ಒಳಗೊಂಡ ಮನವಿ ನೀಡಿದ್ದಾರೆ .

Back to top button